ಮುಸ್ಲಿಂ ಜನಸಂಖ್ಯೆ ಇರುವ ಲಕ್ಷದ್ವೀಪಕ್ಕೆ ಕಣ್ಣಿಟ್ಟ ಮೋದಿ, ಇನ್ನುಮುಂದೆ ನಡೆಯುವುದು ಇತಿಹಾಸ

 | 
B

ಜನವರಿ 4 ರಿಂದ ಯಾರ ಬಾಯಲ್ಲಿ ಕೇಳಿದರೂ ಲಕ್ಷದ್ವೀಪದ್ದೇ ಮಾತು. ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ತೆರಳಿದ್ದು ಮಾತ್ರವಲ್ಲ, ಇಲ್ಲಿನ ಫೋಟೊಗಳನ್ನು ಹಂಚಿಕೊಂಡು ಲಕ್ಷದ್ವೀಪದ ಸೊಬಗನ್ನು ವಿವರಿಸಿದ್ದರು. ಇದರಿಂದ ಹಲವರು ಲಕ್ಷದ್ವೀಪದ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಈಗಾಗಲೇ ಲಕ್ಷದ್ವೀಪಕ್ಕೆ ಹೋಗಿ ಅಲ್ಲಿನ ಸೌಂದರ್ಯವನ್ನು ಆಸ್ವಾದಿಸಿದವರು ಫೋಟೊಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ, ಮಾತ್ರವಲ್ಲ ಲಕ್ಷದ್ವೀಪಕ್ಕೆ ತೆರಳುವಂತೆ ಮನವಿ ಮಾಡುತ್ತಿದ್ದಾರೆ.

ಈ ಹಿಂದೆ ಪೋರ್ಚುಗೀಸರು ಹಾಗೂ ಮಧ್ಯಕಾಲೀನದಲ್ಲಿ ಚೋಳ ಸಾಮ್ರಾಜ್ಯವೂ ಇಲ್ಲಿ ಆಡಳಿತ ನಡೆಸಿತ್ತೆಂದು ತಿಳಿದುಬರುತ್ತದೆ. ತದನಂತರ ಟಿಪ್ಪು ಸುಲ್ತಾನನ ಕೈವಶವಾಗಿ ಕೊನೆಯದಾಗಿ ಬ್ರಿಟಿಷರ ಆಡಳಿತಕ್ಕಿದು ಒಳಪಟ್ಟಿತು. ಬ್ರಿಟಿಷರು ಭಾರತವನ್ನು ತೊರೆದ ನಂತರ ಈ ನಡುಗಡ್ಡೆಗಳ ಸಮೂಹವು ಸ್ವತಂತ್ರ ಭಾರತದ ಅಧೀನಕ್ಕೊಳಪಟ್ಟು ನಂತರ ಇದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಲಾಯಿತು.

ಲಕ್ಷದ್ವೀಪದ  ಇತಿಹಾಸ ಬಲು ರೋಚಕವಾಗಿದೆ. ಮುಸ್ಲಿಂ ಬಾಹುಳ್ಯದ ಈ ದ್ವೀಪ ಸಮೂಹವನ್ನು ವಶಕ್ಕೆ ಪಡೆಯಲು ಪಾಕಿಸ್ತಾನ ಯತ್ನಿಸಿತ್ತು. ಅರ್ಧ ಗಂಟೆ ತಡವಾಗಿದ್ದರೂ ಲಕ್ಷದ್ವೀಪ ನಮ್ಮದಾಗಿರುತ್ತಿರಲಿಲ್ಲ. ಪಾಕಿಸ್ತಾನದ ಈ ಸಂಚನ್ನು ಭಾರತ ವಿಫಲಗೊಳಿಸಿದೆ.  ಪ್ರಸ್ತುತ ಕರವಟ್ಟಿ ಪ್ರದೇಶವು ಲಕ್ಷದ್ವೀಪದ ರಾಜಧಾನಿ ಪಟ್ಟಣವಾಗಿ ದೆ. ಈ ಪ್ರದೇಶವು ಕೇರಳ ಹೈಕೋರ್ಟ್ ವ್ಯಾಪ್ತಿಗೆ ಬರುತ್ತದೆ.ನವಂಬರ್ 1, 1956 ರಲ್ಲಿ ನಡೆದ ರಾಜ್ಯ ಪುನರ್ವಿಂಗಡನಾ ಕಾರ್ಯದ ಬಳಿಕ ಅಂದಿನ ಮದ್ರಾಸ್ ವ್ಯಾಪ್ತಿಗೆ ಒಳಪಟ್ಟಿದ್ದ ಲಕ್ಷದ್ವೀಪ ನಡುಗಡ್ಡೆಗಳನ್ನು ವಿಭಜಿಸಿ ಪ್ರತ್ಯೇಕವಾದ ಆಡಳಿತವನ್ನು ಇಲ್ಲಿ ಕೈಗೊಳ್ಳಲಾಯಿತು. ನಂತರ ನವಂಬರ್ 1, 1973 ರಲ್ಲಿ ಇದಕ್ಕೆ ಅಧಿಕೃತವಾಗಿ ಲಕ್ಷದ್ವೀಪ ಎಂಬ ಹೆಸರನ್ನಿಡಲಾಯಿತು.

1947ರಲ್ಲಿ ಸ್ವಾತಂತ್ರ್ಯ ನಂತರ ಲಕ್ಷದ್ವೀಪ ಭಾರತದ ಭಾಗವಾಯ್ತು. ಆರಂಭದಲ್ಲಿ ಲಕ್ಷದ್ವೀಪವನ್ನು ನಿರ್ಲಕ್ಷಿಸಲಾಗಿತ್ತು. ಹೀಗಾಗಿ ಲಕ್ಷದ್ವೀಪದ ಮೇಲೆ ಪಾಕಿಸ್ತಾನದ  ಪ್ರಧಾನಿ ಲಿಯಾಖತ್ ಕಣ್ಣು ಹಾಕಿದ್ದ. ಇದೇ ವೇಳೆ ಸರ್ದಾರ್ ವಲ್ಲಭಾಯ್ ಪಟೇಲ್ ಚಿತ್ತವೂ ಹರಿದಿತ್ತು. ಇದನ್ನರಿತ ಪಾಕಿಸ್ತಾನ ಕೂಡಲೇ ಲಕ್ಷದ್ವೀಪದತ್ತ ಯುದ್ಧ ನೌಕೆ ಕಳುಹಿಸಿತ್ತು. ಆದರೆ ಇದಕ್ಕೂ ಮೊದಲೇ ಭಾರತೀಯ ಸೇನೆ ಲಕ್ಷದ್ವೀಪ ತಲುಪಿತ್ತು. ಭಾರತದ ತ್ರಿವರ್ಣ ಪತಾಕೆ ಕಂಡು ಸದ್ದಿಲ್ಲದೇ ಪಾಕ್ ಸೇನೆ ವಾಪಸ್ ಆಗಿತ್ತು. ಆ ಕ್ಷಣದಿಂದಲೂ ಲಕ್ಷದ್ವೀಪ ಭಾರತದ ಭಾಗವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಲಕ್ಷದ್ವೀಪದ ಪ್ರವಾಸಿ ತಾಣಗಳ ಬಗ್ಗೆ ಹುಡುಕಾಟ ನಡೆದಿದೆ. ಶುಕ್ರವಾರವೊಂದೇ ದಿನ 50ಸಾವಿರಕ್ಕೂ ಹೆಚ್ಚು ಜನ ಲಕ್ಷದ್ವೀಪದ ಬಗ್ಗೆ ಜಾಲಾಡಿದ್ದಾರೆ. ಇದು 20 ವರ್ಷದಲ್ಲೇ ಗರಿಷ್ಠ.. ಮೇಕ್ ಮೈ ಟ್ರಿಪ್‍ನಲ್ಲಿ ಲಕ್ಷದ್ವೀಪಕ್ಕಾಗಿ ಹುಡುಕುವರರ ಪ್ರಮಾಣ 3,400 ಪಟ್ಟು ಜಾಸ್ತಿಯಾಗಿದೆ. ಕವರಟ್ಟಿ ದ್ವೀಪ: ಇದು ಲಕ್ಷದ್ವೀಪದ ರಾಜಧಾನಿಯಾಗಿದ್ದು, 
* ಕವರಟ್ಟಿ ಸಮುದ್ರ ತೀರದಲ್ಲಿ ಸೂರ್ಯೋದಯ, ಸೂರ್ಯಾಸ್ತ ಕಣ್ತುಂಬಿಕೊಳ್ಳುವುದು ಒಂದು 
*ಸೌಭಾಗ್ಯವೇ ಸರಿ. 
*
* ಮಿನಿಕಾಯ್ ದ್ವೀಪ: ತಿಳಿ ನೀಲಿ ಅಕಾಶ ನೋಡುತ್ತಾ ತಿಳಿಯಂತೆ ಕಾಣುವ ಸಮುದ್ರದಲ್ಲಿ ಬೋಟಿಂಗ್ ಹೋಗಲು ಹೇಳಿ ಮಾಡಿಸಿದ ತಾಣ ಈ ಮಿನಿಕಾಯ್ ದ್ವೀಪವಾಗಿದೆ. * ಅಮಿನಿ ಬೀಚ್: ಸ್ಕೂಬಾ ಡೈವಿಂಗ್ ಮಾಡುವವರು ಈ ದ್ವೀಪಕ್ಕೆ ತಪ್ಪದೇ ಹೋಗುತ್ತಾರೆ. ಅಪಾರ ಜಲಚರ, ಹವಳದ ದಿಬ್ಬಗಳನ್ನು ಇಲ್ಲಿ ಕಾಣಬಹುದಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.