ಈ ರೀಲ್ಸ್ ಗಳು ಬಂದ ಮೇಲೆ ಈಗಿನ Generation ಹಾಳಾಗಿ ಹೋಗಿದೆ; ವಿಜಯ್ ರಾಘವೇಂದ್ರ

ಜನಪದ, ಧಾರ್ಮಿಕತೆ, ಸಾಮಾಜಿಕ ಅಸಮಾನತೆ, ಥ್ರಿಲ್ಲರ್ ಕತೆ, ಹಾರರ್, ಸೆಂಟಿಮೆಂಟ್, ಪ್ರೇಮಕತೆ, ಭರ್ಜರಿ ಆಕ್ಷನ್ ಎಲ್ಲವನ್ನೂ ಒಳಗೊಂಡ ಅಪರೂಪದ ಸಿನಿಮಾ ಒಂದರಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದು, ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಪೂರ್ಣಗೊಂಡಿದೆ. ರುದ್ರಾಭಿಷೇಕಂ ಹೆಸರಿನ ಹಳ್ಳಿಗಾಡಿನ ಕತೆಯುಳ್ಳ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಪ್ರಧಾನ ಪಾತ್ರದಲ್ಲಿ ಮಿಂಚಿದ್ದು, ಈ ಸಿನಿಮಾಕ್ಕಾಗಿ ಹಲವು ಜನಪದ ಕಲೆಗಳ ಪ್ರದರ್ಶನಗಳನ್ನು ಮಾಡಿದ್ದಾರೆ.
ಬಿಡುಗಡೆಗೆ ಸಿನಿಮಾ ತಯಾರಾಗುತ್ತಿದ್ದು, ಇತ್ತೀಚೆಗಷ್ಟೆ ಚಿತ್ರತಂಡ ಕುಂಬಳಕಾಯಿ ಒಡೆದು, ಶೂಟಿಂಗ್ ಮುಕ್ತಾಯ ಮಾಡಿದೆ.ಇನ್ನು ಇತ್ತೀಚಿಗಷ್ಟೇ vtu ಅಲ್ಲಿ ನಡೆದ ಯುವಜನೋತ್ಸವದಲ್ಲಿ ವಿಜಯ್ ರಾಘವೇಂದ್ರ ಮಕ್ಕಳಿಗಾಗಿ ಸ್ಪೂರ್ತಿ ನೀಡುವ ಮಾತನ್ನು ಹೇಳಿದ್ದಾರೆ. ಇನ್ನೇನು ವಯಸ್ಸಾಯಿತು ಅಂದುಕೊಳ್ಳುವಷ್ಟರಲ್ಲಿ ಚಿನ್ನಾರಿ ಮುತ್ತ ಹಾಡು ಬರುತ್ತದೆ.
ಹೊಸ ಸಿನಿಮಾ ನನಗೆ ಹೆಚ್ಚು ಉತ್ಸಾಹ ನೀಡುತ್ತದೆ. ಅದರಂತೆ ಹೊಸ ವಿಷಯಗಳ ಕಲಿಕೆ ವಿಧ್ಯಾರ್ಥಿಗಳಿಗೆ ಉತ್ಸಾಹ ತುಂಬಬೇಕು ಎಂದಿದ್ದಾರೆ. ಇನ್ನು ವೀರಗಾಸೆ, ಕಂಪೆನಿ ನಾಟಕ, ವೀರಭದ್ರನ ಆರಾಧನೆ ಇನ್ನೂ ಕೆಲ ಪ್ರಧಾನ ವಿಷಯಗಳನ್ನು ಕೇಂದ್ರವಾಗಿಟ್ಟುಕೊಂಡು ನಿರ್ದೇಶಕ ವಸಂತ್ ಕುಮಾರ್ ಅವರು ಕತೆ ಹೆಣೆದಿದ್ದು, ಇತ್ತೀಚೆಗಷ್ಟೆ ಬೆಂಗಳೂರು ವಿಮಾನ ನಿಲ್ದಾಣದ ಸಮೀಪದ ಚಿಕ್ಕತತ್ತಮಂಗಲ ಗ್ರಾಮದ ವೀರಭದ್ರನ ದೇವಾಲಯದ ಸಮೀಪ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡುವ ಮೂಲಕ ಚಿತ್ರೀಕರಣ ಪೂರ್ಣಗೊಳಿಸಿದರು.
ಕ್ಲೈಮ್ಯಾಕ್ಸ್ ದೃಶ್ಯಕ್ಕೆ ವೀರಭದ್ರನ ಅವತಾರ ತಾಳಿದ್ದ ವಿಜಯ್ ರಾಘವೇಂದ್ರ ಮೈಗೆಲ್ಲ ಕಪ್ಪು ಬಳಿದುಕೊಂಡು, ಎರಡೂ ಕೈಯಲ್ಲಿ ಕತ್ತಿ ಹಿಡಿದು ದುಷ್ಟರನ್ನು ಸಂಹಾರ ಮಾಡುವ ದೃಶ್ಯಗಳನ್ನು ಸೆರೆ ಹಿಡಿಯಲಾಯ್ತು. ನಾಟಕದ ಹಿನ್ನೆಲೆಯಲ್ಲಿ ಈ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆದಿದ್ದು ವಿಶೇಷ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ನಟ ರಾಜು ಬಾಲವಾಡಿ ಸೇರಿದಂತೆ ಇನ್ನೂ ಹಲವರು ಭಾಗಿಯಾಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.