ಮದುವೆಯಾದ ಒಂದೇ ತಿಂಗಳಿಗೆ ನಾನು ಗ ರ್ಭಿಣಿ; ಪತಿಯನ್ನು ಹಾಡಿ ಹೊಗಳಿದ ಅಮಲಾ ಪೌಲ್

 | 
Uu
ಕಿಚ್ಚ ಸುದೀಪ್ ನಟಿಸಿದ ಹೆಬ್ಬುಲಿ ಸಿನಿಮಾದ ನಟಿ ಅಮಲಾ ಪೌಲ್ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಕೆಲವೊಮ್ಮೆ ವಿವಾದಗಳಿಂದ ಸುದ್ದಿಯಲ್ಲಿ ಇರುತ್ತಾರೆ. ಮತ್ತೊಮ್ಮೆ ಕಾಸ್ಟ್ಯೂಮ್‌ನಿಂದ ಟ್ರೋಲ್‌ಗೆ ಒಳಗಾಗುತ್ತಾರೆ. ಇನ್ನೊಮ್ಮೆ ಏನೋ ಹೇಳಿಕೆ ಕೊಟ್ಟು ಟೀಕೆಗೆ ಗುರಿಯಾಗುತ್ತಾರೆ. ಇದೆಲ್ಲವನ್ನೂ ಹೊರತು ಪಡಿಸಿ, ಇತ್ತೀಚೆಗೆ ಅಮಲಾ ಪೌಲ್ ಗಂಡು ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದರು.
ಅಮಲಾ ಪೌಲ್ ಗರ್ಭ ಧರಿಸಿದ ಬಳಿಕ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. ತಮ್ಮ ಸಿನಿಮಾ ಪ್ರಚಾರದಲ್ಲಿ ಆಕ್ಟಿವ್ ಆಗಿ ಓಡಾಡಿದ್ದರು. ಹೆರಿಗೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅಂದಾಗ, ವೇದಿಕೆ ಮೇಲೆ ಹೆಜ್ಜೆ ಹಾಕಿ ಹುಬ್ಬೇರಿಸಿದ್ದರು. ಇದೇ ಸಮಯದಲ್ಲಿ ಅಮಲಾ ಪೌಲ್‌ಗೆ ಸಿನಿಮಾದಲ್ಲೂ ಯಶಸ್ಸು ಸಿಕ್ಕಿತ್ತು. ಈಕೆ ನಟಿಸಿದ 'ಆಡು ಜೀವಿತಂ' ಸಿನಿಮಾ ಬಾಕ್ಸಾಫೀಸ್‌ನಲ್ಲೂ ಗೆದ್ದು ಬೀಗಿತ್ತು.
ಇತ್ತೀಚೆಗೆ ಅಮಲಾ ಪೌಲ್ ನಟಿಸಿದ 'ಲೆವೆಲ್ ಕ್ರಾಸ್' ಅನ್ನುವ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ಸಿನಿಮಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಹೆರಿಗೆ ಬಳಿಕ ವಿಶ್ರಾಂತಿ ಪಡೆಯದೆ ಅಮಲಾ ಪೌಲ್ ಓಡಾಡುತ್ತಿದ್ದಾರೆ. ಈ ನಟಿಯ ಕಮಿಟ್‌ಮೆಂಟ್‌ಗೆ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ ಜಗತ್ ದೇಸಾಯಿ ಕೂಡ ಪತಿಗೆ ಸಂಪೂರ್ಣ ಬೆಂಬಲ ಕೊಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಗೆಳತಿ ಪರ್ಲ್‌ ಮಣಿ ಶೋನಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಓಪನ್ ಆಗಿ ಮಾತಾಡಿಕೊಂಡಿದ್ದಾರೆ.
ಈ ಸಂದರ್ಶನದಲ್ಲಿ ಅಮಲಾ ಪೌಲ್ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಟೀಕೆಗೆ ಗುರಿಯಾಗಿದ್ದನ್ನು ನೆನಪಿಸಿಕೊಂಡಿದ್ದಾರೆ. ಆದರೆ, ಅದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಹಾಗೇ ಮಗ ಇಳೈ ಹಾಗೂ ಪತಿ ಜಗತ್ ದೇಸಾಯಿ ಇಬ್ಬರು ತನ್ನ ಜೀವನದಲ್ಲಿ ಬಂದಿದ್ದಕ್ಕೆ ನಾನು ಅದೃಷ್ಟಶಾಲಿ ಎಂದು ಹೇಳಿಕೊಂಡಿದ್ದಾರೆ. ಹಾಗೇ ಗರ್ಭಿಣಿಯಾಗಿದ್ದಾಗ, ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತೇವೆ. ಆರಾಮಾಗಿ ಉಳಿದುಬಿಡುತ್ತಿದ್ದೆ. ಪತಿ ಜಗತ್ ಇಲ್ಲದೆ ಇದ್ದಿದ್ದರೆ, ನಾನು ಹಾಗೇ ಆಗುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. 
ಇದೇ ವೇಳೆ ಅಮಲಾ ಪೌಲ್ ತನ್ನ ಪತಿ ಜಗತ್‌ಗೂ ಸಿನಿಮಾ ಅಂದರೆ, ತುಂಬಾನೇ ಇಷ್ಟವೆಂದು ಹೇಳಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ಕಾಣುವ ಕನಸನ್ನು ನಾನು ಕಾಣುತ್ತೇನೆ. ನಾನು ಬಯಸಿದ್ದಕ್ಕಿಂತ ಉತ್ತಮ ಜೀವನ ಸಿಕ್ಕಿದೆ. ಪತಿ ಜಗತ್ ದೇಸಾಯಿಯನ್ನು ಭೇಟಿಯಾದ ಒಂದು ತಿಂಗಳಲ್ಲಿಯೇ ನಾನು ಗರ್ಭಿಣಿಯಾದೆ ಎಂದು ಹೇಳಿಕೊಂಡಿದ್ದಾರೆ. ಅಮಲಾ ಪೌಲ್ ಈ ಸಂದರ್ಶನ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.