Instagram ನಲ್ಲಿ 2.7 ಕೋಟಿ ರೂ ಕಳೆದುಕೊಂಡ ಮಹಿಳೆ; ಆ ವಿಡಿಯೋ ಲೀ ಕ್ ಮಾಡಿ ದರೋಡೆ
ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ಬಳಕೆದಾರರೇ ಬಿ ಅಲರ್ಟ್. ಹಣ ಸಿಗುತ್ತೆ ಅಂತ ನೀವೇನಾದ್ರೂ ಬಿಟ್ಟಿ ದುಡ್ಡಿಗೆ ಆಸೆ ಪಟ್ರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕಾಲಿ ಆಗೋದು ಪಕ್ಕಾ. ಹೀಗೆ ಇದೇ ರೀತಿ ಹಣ ಸಿಗುತ್ತೆ ಅಂತ ಮಹಿಳೆಯೊಬ್ಬಳು ಕಳೆದೊಕೊಂಡಿರೋದು ಬರೋಬ್ಬರಿ ಎರಡೂವರೆ ಕೋಟಿ. ಆದ್ರೆ ಮಹಿಳೆ ಮಾಡಿದ ಅದೊಂದು ಚಾಲಾಕಿತನದಿಂದ ಇಲ್ಲಿ ಒಂದೂವರೆ ಕೋಟಿ ವಾಪಸ್ ಪಡೆದಿದ್ದಾರೆ.
ಯೂಟ್ಯೂಬ್ ಲಿಂಕ್ ಲೈಕ್ ಮಾಡಿ ಹಣ ಗೆಲ್ಲಿ ಅಂತಾ ಮೆಸೇಜ್ ಬಂದಿದೆ. ಇದನ್ನು ನೋಡಿದ ಕೂಡಲೇ ಮಹಿಳೆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾಳೆ. ಅದಕ್ಕೆ ವಂಚಕರು ಥ್ಯಾಂಕ್ಯೂ ಅಂತಾ ಮೆಸೇಜ್ ಕಳುಹಿಸಿದ್ದಾರೆ. ಬಳಿಕ ಇದೇ ರೀತಿ ಹಣ ಇನ್ವೆಸ್ಟ್ ಮಾಡಿ ಡಬಲ್ ಆಗುತ್ತೆ ಅಂತಾ ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ ಡಬಲ್ ಆಗುತ್ತಾ ನಂಬಿ ಇನ್ವೆಸ್ಟ್ ಮಾಡ್ತೀನಿ ಅಂತಾ ಹೇಳಿದ್ದಾಳೆ.
ಹೀಗೆ ಶುರುವಾಗಿದ್ದ ವಂಚಕರ ಜಾಲಕ್ಕೆ ಬಿದ್ದಿದ್ದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಆಂಟ್ರಪ್ರನ್ಯೂವರ್ ಆಗಿ ಕೆಲಸ ಮಾಡ್ತಿದ್ದ 52 ವರ್ಷದ ಮಹಿಳೆ. ಹಂತ ಹಂತವಾಗಿ ಬರೋಬ್ಬರಿ 2.7 ಕೋಟಿ ಹಣ ಇನ್ವೆಸ್ಟ್ ಮಾಡಿದ್ರು. ಆದ್ರೆ ಕಳೆದುಕೊಂಡಿದ್ದ 2.7 ಕೋಟಿ ಹಣದಲ್ಲಿ 1.7 ಕೋಟಿ ಹಣವನ್ನ ಮಹಿಳೆ ವಾಪಸ್ ಪಡೆಯೋದರಲ್ಲಿ ಯಶಸ್ವಿಯಾಗಿದ್ದಾರೆ.
ಏಪ್ರಿಲ್ನಲ್ಲಿ ಖದೀಮರಿಂದ ಮಹಿಳೆಗೆ ಬಂದಿದ್ದ ಮೆಸೇಜ್ ಬಂದಿತ್ತು. ಆ ಮೆಸೇಜ್ನಲ್ಲಿ ಯೂಟ್ಯೂಬ್ ಲಿಂಕ್ ಲೈಕ್ ಮಾಡುವಂತೆ ಆಮೀಶ ಒಡ್ಡಿದ್ರು. ಈ ಮೆಸೇಜ್ಗೆ ಮಹಿಳೆ ರಿಪ್ಲೆ ಮಾಡಿ ಬಳಿಕ ಯೂಟ್ಯೂಬ್ ಚಾನೆಲ್ಗೆ ಲೈಕ್ ಮಾಡಿದ್ರು. ಹೀಗೆ ಲೈಕ್ ಮಾಡಿದ್ರಿಂದ ಮಹಿಳೆಗೆ 10 ಸಾವಿರ ಅಮೌಂಟ್ ಬಂದಿತ್ತು. ಬಳಿಕ ಮಹಿಳೆ ಜಾಲಕ್ಕೆ ಬಿದ್ದಿದ್ದು, ಕನ್ಫರ್ಮ್ ಆದ ಮೇಲೆ ಇನ್ವೆಸ್ಟ್ ಮಾಡುವಂತೆ ಹಾಗೂ ಹಣ ಡಬಲ್ ಆಗುವಂತೆ ವಂಚಕರು ಆಫರ್ ಕೊಟ್ಟಿದ್ರು.
ಇದಕ್ಕೆ ಮಹಿಳೆ ಯೆಸ್ ಎಂದಿದ್ರು, ಬಳಿಕ ಮಹಿಳೆಯನ್ನ ಟೆಲಿಗ್ರಾಂಗೆ ಗ್ರೂಪ್ಗೆ ಆ್ಯಡ್ ಕೂಡ ಮಾಡಲಾಗಿತ್ತು. ಈ ಗ್ರೂಪ್ನಲ್ಲಿದ್ದ ನೂರಾರು ಮಂದಿ ಹಣ ಡಬಲ್ ಆದ ಬಗ್ಗೆ ಮೆಸೇಜ್ ಹಾಕ್ತಿದ್ರು. ಇದನ್ನ ನಂಬಿದ್ದ ಮಹಿಳೆ ಹಣ ಹಂತಹಣತವಾಗಿ 2.7 ಕೋಟಿ ಹಣ ಇನ್ವೆಸ್ಟ್ ಮಾಡಿದ್ರು.
ಬಳಿಕ ಪದೇ ಪದೇ ಬರ್ತಿದ್ದ ಮೆಸೇಜ್ನಿಂದ ಅನುಮಾನ ಬಂದಿದ್ದ ಮಹಿಳೆ ಮನೆಯವರಿಗೆ ವಿಚಾರ ತಿಳಿಸಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕೊಟ್ಟ ದೂರಿನಿಂದ ಖದೀಮರ ಬ್ಯಾಂಕ್ ಅಕೌಂಟ್ ಟ್ರೇಸ್ ಮಾಡಿ ಫ್ರೀಜ್ ಮಾಡಿದ್ರಿಂದ ಮಹಿಳೆ ಕಳೆದುಕೊಂಡಿದ್ದ 2.7 ಕೋಟಿ ಹಣದಲ್ಲಿ 1.7 ಕೋಟಿ ವಾಪಸ್ಸಾಗಿದೆ.
ಅದೇನೆ ಇರಲಿ ಪೊಲೀಸ್ ಇಲಾಖೆ ಹಾಗೂ ಸರ್ಕಾರ ಎಷ್ಟೇ ಎಚ್ಚರವಹಿಸಿದ್ರೂ ಖದೀಮರ ಆಟಕ್ಕಂತೂ ಕಡಿವಾಣ ಬೀಳುತ್ತಿಲ್ಲ. ಇನ್ಮುಂದೆ ಗೊತ್ತಿಲ್ಲದ ಲಿಂಕ್ ಕ್ಲಿಕ್ ಮಾಡೋ ಮುನ್ನ ಹುಷಾರಾಗಿರಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.