ಡ್ರೋನ್ ಪ್ರತಾಪ್ ಪರವಾಗಿ ನಿಂತ ಮಹಿಳೆ, ಬಿಗ್ ಬಾಸ್ ಎಡವಟ್ಟಿಗೆ ಮಹಿಳೆ ಫುಲ್ ಗರಂ
ಡ್ರೋನ್ ಪ್ರತಾಪ್ ಮತ್ತು ಕುಟುಂಬದ ಮಧ್ಯೆ ಕಳೆದ ಮೂರು ವರ್ಷಗಳಿಂದ ಸಂಪರ್ಕವೇ ಇರಲಿಲ್ಲ. ಪ್ರತಾಪ್ ಎದುರಿಸಿದ ಡ್ರೋನ್ ವಂಚನೆ ಆರೋಪದಿಂದ ಅಪಮಾನಕ್ಕೆ ಒಳಗಾದ ಕುಟುಂಬ ಅವರನ್ನು ದೂರ ಇಟ್ಟಿತ್ತು. ಬಿಗ್ ಬಾಸ್ ಮನೆಯೊಳಗೆ ಕಳುಹಿಸುವಾಗಲೂ ಪ್ರತಾಪ್ ಒಂಟಿಯಾಗಿಯೇ ಬಂದಿದ್ದರು. ಬಿಗ್ ಬಾಸ್ ಮನೆಯಲ್ಲಿ ಹಲವು ಬಾರಿ ’ನಾನು ನಮ್ಮ ತಂದೆ – ತಾಯಿ ಜೊತೆಗೆ 3 ವರ್ಷಗಳಿಂದ ಮಾತನಾಡಿಲ್ಲ. ಒಮ್ಮೆ ಮಾತನಾಡಿಸಿ ಪ್ಲೀಸ್ ಎಂದು ಗೋಗರೆದಿದ್ದರು.
ಇತ್ತೀಚೆಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಅವರ ಮನೆಯಿಂದ ಸ್ಪೆಷಲ್ ಫುಡ್ ಬಂದಿತ್ತು ಮತ್ತು ಪತ್ರವೂ ಬಂದಿತ್ತು. ಪ್ರತಾಪ್‌ಗೆ ಪಾಯಸ ಬಂದಿತ್ತು. ಆದರೆ, ಪತ್ರವನ್ನು ಪಡೆಯಲು ಟಾಸ್ಕ್ ಇದ್ದಿದ್ದರಿಂದ ಎಲ್ಲರಿಗೂ ಪತ್ರ ಸಿಕ್ಕಿರಲಿಲ್ಲ. ಪ್ರತಾಪ್ ಗೂ ಪತ್ರ ಸಿಕ್ಕಿರಲಿಲ್ಲ. ಹೀಗಾಗಿ ಈ ಪಾಯಸ ಮನೆಯಿಂದಲೇ ಬಂತಾ ಇಲ್ಲವಾ ಎನ್ನುವುದರ ಬಗ್ಗೆ ಡ್ರೋನ್ ಪ್ರತಾಪ್‌ಗೆ ಸ್ಪಷ್ಟತೆ ಇರಲಿಲ್ಲ.
ಮನೆಯಿಂದ ಬರುವ ಪತ್ರದಲ್ಲಿ ಏನು ನಿರೀಕ್ಷೆ ಮಾಡುತ್ತಿದ್ದಿರಿ ಎಂದು ಸುದೀಪ್ ಕೇಳಿದಾಗ, ಪತ್ರವನ್ನೇ ನಿರೀಕ್ಷೆ ಮಾಡುತ್ತಿದ್ದರೆ ಸರ್ ಎಂದರು ಪ್ರತಾಪ್. 3 ವರ್ಷದಲ್ಲಿ ಏನು ನಿರೀಕ್ಷೆ ಮಾಡ್ತಿದ್ರಿ ಎಂದು ಕೇಳಿದಾಗ, ಅಪ್ಪ.. ನಮ್ಮ ಅಪ್ಪ ಹೇಳುವ ಮಾತನ್ನ ನಿರೀಕ್ಷೆ ಮಾಡ್ತಿದ್ದೆ ಸರ್ ಎಂದರು. ಅಷ್ಟು ಹೊತ್ತಿಗೆ ಡ್ರೋನ್ ಒಮ್ಮೆಗೇ ಭಾವುಕರಾದರು… ಅಪ್ಪಾ.. ಅಂದರು. ಆಗ ಸುದೀಪ್ ನೀವು ಅಪ್ಪಾ ಅಂತ ಕರೆಯೋದು ಹಿತವಾಗಿದೆ.
ಇನ್ನೊಮ್ಮೆ ಜೋರಾಗಿ ಕರೆಯಿರಿ ಅಂದರು. ಆಗ ಪ್ರತಾಪ್ ಜೋರಾಗಿ ಮತ್ತು ಅಷ್ಟೇ ಹಿತವಾಗಿ ʻಅಪ್ಪಾ…ʼ ಎಂದರು. ಆಗ ಒಮ್ಮಿಂದೊಮ್ಮೆಗೇ ಅಪ್ಪನಿಗೆ ಕಾಲ್ ಕನೆಕ್ಟ್ ಆಗಿ ಅಪ್ಪ ಲೈನ್‌ಗೆ ಬಂದರು!ಅಪ್ಪನ ಧ್ವನಿ ಕೇಳುತ್ತಲೇ ಡ್ರೋನ್ ದುಃಖದ ಕಟ್ಟೆ ಒಡೆದೇ ಹೋಯಿತು. ಬಿಕ್ಕಿ ಬಿಕ್ಕಿ ಅತ್ತಾಗ ಅಪ್ಪನೇ ಸಮಾಧಾನ ಮಾಡಿದರು. ಅಳಬೇಡ.. ಯಾಕೆ ಅಳ್ತಿದಿಯಾ ಎಂದು ಕೇಳಿದರು.
ಡ್ರೋನ್ ಮತ್ತು ಅಪ್ಪ ಚೆನ್ನಾಗಿ ಮಾತನಾಡಿಕೊಂಡರು. ಡ್ರೋನ್ ನಾನು ಮಾಡಿದ್ದೆಲ್ಲ ತಪ್ಪಾಯ್ತು ಅಂತ ಕ್ಷಮೆ ಕೇಳಿದರು. ಅಮ್ಮ, ಪುಟ್ಟಿ ಹೇಗಿದ್ದಾರೆ ಎಂದು ವಿಚಾರಿಸಿದರು. ನೀನು ಚೆನ್ನಾಗಿ ಆಡ್ತಾ ಇದ್ದೀಯಾ.. ಆಡು. ಊರವರೂ ಚೆನ್ನಾಗಿ ಆಡ್ತಿದ್ದೀಯಾ ಅಂತಿದ್ದಾರೆ. ಪುಟ್ಟೀನೂ ಹೇಳ್ತಿದ್ದಾಳೆ ಎಂದು ಅಪ್ಪ ಹೇಳಿದರು.
ಅದನ್ನೆಲ್ಲ ನೋಡಿದ ಡ್ರೋನ್ ಪ್ರತಾಪ್ ಅಭಿಮಾನಿ ಮಹಿಳೆಯೊಬ್ಬರು ಡ್ರೋನ್ ಪ್ರತಾಪ್ ಅವರಿಗೆ ಒಂದು ಚಾನ್ಸ್ ನೀಡಿ ಅವರನ್ನು ಅವರ ಮನೆಯವರೊಂದಿಗೆ ಒಂದು ಮಾಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ವಿನಯ್ ಹಾಗೂ ತು ಕಾಲಿ ಸಂತೋಷ್ ಅವರಿಗೆ ಕೆಂಗಣ್ಣು ಬೀರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ