ಬಿಗ್ಬಾಸ್ ಮನೆಯಿಂದ ಒಂದೇ ವಾರಕ್ಕೆ ಹೊರಕ್ಕೆ, ಕಿಚ್ಚ ಸುದೀಪ್ ವಿರುದ್ಧ ಗುಡುಗಿದ ಯಮುನಾ
| Oct 8, 2024, 08:28 IST
ಕನ್ನಡ ಕಿರುತೆರೆಯಲ್ಲಿ ಮಿಂಚಿದ ಯಮುನಾ ಶ್ರೀನಿಧಿ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ನಟಿ.ಅವರ ಆಟಿಟೂಡ್ ನೋಡಿ ಕಡಿಮೆ ಅಂದ್ರು 8 - 9 ವಾರಗಳಾದರೂ ಇರುತ್ತಾರೆ ಎಂದೇ ಅನೇಕರು ಭಾವಿಸಿದ್ದರು. ಆದರೆ ಕಡಿಮೆ ಮತದಿಂದ ಯಮುನಾ ಅವ್ರು ಒಂದೇ ವಾರಕ್ಕೆ ಮನೆಯಿಂದ ಹೊರ ಬಂದಿದ್ದಾರೆ.ಬಿಗ್ ಬಾಸ್ ಮನೆಗೆ ಹೋದ ದಿನದಿಂದಲೂ ತಮ್ಮ ಧ್ವನಿಯ ಮೂಲಕವೇ ಸದ್ದು ಮಾಡಿದ್ದ ಯಮುನಾ ಅವರಿಗೆ ಇದೇ ಮುಳುವಾಯಿತಾ ಎಂಬ ವಿಚಾರ ಚರ್ಚೆಯಾಗುತ್ತಿದೆ.
ಯಮುನಾ ಶ್ರೀನಿಧಿ ಖ್ಯಾತ ನಟಿ ಜೊತೆಗೆ ಭರತನಾಟ್ಯ ಪ್ರವೀಣೆ. ಇವರ ಹೆಜ್ಜೆಗೆ ಮನಸೋಲದವರಿಲ್ಲ. ನಾಟ್ಯ ಮಯೂರಿಯಂತೆ ಹೆಜ್ಜೆ ಹಾಕುತ್ತಾರೆ. ಅಮೆರಿಕದಲ್ಲಿಯೂ ತಮ್ಮ ಪ್ರತಿಭೆ ತೋರಿದ್ದಾರೆ.ನಟಿ ಹಾಗೂ ನೃತ್ಯಗಾರ್ತಿ ಯಮುನಾ ಶ್ರೀನಿಧಿ ಅವರು ಆರನೇ ವಯಸ್ಸಿನವರಿದ್ದಾಗ ಅವರಿಗೆ ಭರತನಾಟ್ಯದ ಮೇಲೆ ಒಲವು ಶುರುವಾಯಿತು. ಅಂದಿನಿಂದ ಅವರು ಭರತನಾಟ್ಯ ನೃತ್ಯವನ್ನು ಆಡುವುದಕ್ಕೆ ಆರಂಭಿಸಿದ್ದಾರೆ.
ಭಾರತದಿಂದ ಅಮೆರಿಕಾಕ್ಕೆ ಹೋಗಿದ್ದ ಯಮುನಾ ಅವರಿಗೆ ಅಮೇರಿಕಾಕ್ಕೆ ಹೋದಾಗ 23 ವಯಸ್ಸು. ವಿದೇಶಕ್ಕೆ ಹೋಗಿದ್ದ ಈಕೆ ಅಲ್ಲಿ ಕನ್ನಡ ಸಂಘದ ಅಧ್ಯಕ್ಷರಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಮೆರಿಕಾಕ್ಕೆ ಹೋಗಿದ್ದ ಯಮುನಾ ಅವರು ಅಲ್ಲಿ ನೃತ್ಯ ಶಾಲೆ ನಡೆಸುತ್ತಿದ್ದರು, ಅಲ್ಲಿ ಅವರ ಬಳಿ ನೃತ್ಯ ಕಲಿಯಲು ಬರುತ್ತಿದ್ದವರು ಇಲ್ಲಿಯೇ ಇರಿ ನಮಗೆ ನೃತ್ಯ ಕಲಿಸಿ ಎಂದು ಬಲವಂತ ಮಾಡಿದ ಕಾರಣಕ್ಕೆ ಭಾರತಕ್ಕೆ ಬರಲು ತಡವಾಯಿತು ಎಂದು ಯಮುನಾ ಈ ಹಿಂದೆ ಹೇಳಿಕೊಂಡಿದ್ದಾರೆ.
ಅಶ್ವಿನಿ ನಕ್ಷತ್ರ ಧಾರವಾಹಿ ಇವರ ಬದುಕಿಗೆ ಟರ್ನಿಂಗ್ ನೀಡಿದ ಧಾರವಾಹಿ. ಈಗಲೂ ಸಹ ಎನ್‌ಸಿಸಿ ಅಭ್ಯರ್ಥಿಗಳಿಗೆ ಯಮುನಾ ಅವರು ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ತಮ್ಮ ಕೈಯಲ್ಲಾದ ಸಹಾಯ ಮಾಡುತ್ತಿದ್ದಾರೆ. ಈವರೆಗೂ ಯಮುನಾ ಅವರು 6000ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳಿಗೆ ಹಾಗೂ 10000 ಎನ್‌ಸಿಸಿ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.
ಯುವರತ್ನ, ಶಿವಲಿಂಗ, ಜಾಗ್ವಾರ್, ಮಿಸ್ಸಿಂಗ್ ಬಾಯ್, ಲವ್ 360, ವೆಡ್ಡಿಂಗ್ ಗಿಫ್ಟ್ ಹೀಗೆ 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಯಮುನಾ ಶ್ರೀನಿಧಿ ನಟಿಸಿದ್ದಾರೆ. ಇನ್ನು ಯಮುನಾ ಶ್ರೀನಿಧಿ ಅವರಿಗೆ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಪ್ರತಿ ವಾರಕ್ಕೆ 2 ಲಕ್ಷ ಸಂಭಾವನೆ ನಿಗದಿಯಾಗಿತ್ತಂತೆ ಎಂದು ಹೇಳಲಾಗುತ್ತಿದೆ.ನಟಿ ಯಮುನಾ ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರಬಂದ ಕಾರಣ ಅವರಿಗೆ ಸಿಕ್ಕ ಸಂಭಾವನೆ 2 ಲಕ್ಷ ಪಡೆದಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಶ್ರೀಕೃಷ್ಣ ತುಪ್ಪದ ಕಡೆಯಿಂದ 1 ಲಕ್ಷದ ಚೆಕ್ ಗಿಫ್ಟ್ ಸಿಕ್ಕಿದೆ. ಒಟ್ಟಾಗಿ 3 ಲಕ್ಷ ಹಣವನ್ನು ಯಮುನಾ ಬಿಗ್ ಬಾಸ್‌ನಿಂದ ಪಡೆದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.