ಕೋಟಿ ಒಡೆಯ ಅಂಬಾನಿ ಕರೆದ ತಕ್ಷಣ ಒಮ್ಮೆಲೇ ಮುಂಬೈಗೆ ಹಾರಿದ ಯಶ್ ದಂಪತಿ
ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ಮದುವೆಯಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ, ನಟ ಯಶ್, ಪತ್ನಿ ರಾಧಿಕಾ ಪಂಡಿತ್ ಜತೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ವಿವಿಧ ಜನಪ್ರಿಯ ಸೆಲೆಬ್ರಿಟಿಗಳ ಮಹಾಸಂಗಮಕ್ಕೆ ದೇಶ-ವಿದೇಶಗಳ ವಿವಿಧ ಕ್ಷೇತ್ರಗಳ ವಿವಿಐಪಿ, ವಿಐಪಿ, ಸಿನಿಮಾ ಸೇರಿದಂತೆ ಸಾಕ್ಷಿಯಾಗಿದ್ದರು.
ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಈ ಬಾರಿ ಕೆಲವು ಕನ್ನಡಿಗರು ಸೇರಿದಂತೆ, ದಕ್ಷಿಣ ಭಾರತದ ಸ್ಟಾರ್‌ಗಳು ಮಿಂಚಿದ್ದು ವಿಶೇಷವಾಗಿತ್ತು. ಮುಕೇಶ್ ಅಂಬಾನಿ ಮನೆಯಲ್ಲಿ ಈ ಹಿಂದೆ ನಡೆದ ಮದುವೆಗಳಲ್ಲಿ ದಕ್ಷಿಣ ಭಾರತದ ಕಲಾವಿದರಾದ ರಜನಿಕಾಂತ್, ಕಾಜಲ್ ಅಗರ್ವಾಲ್, ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದರು. ಈ ಬಾರಿಯ ಅಂಬಾನಿ ಕುಟುಂಬದ ಮದುವೆಯಲ್ಲಿ ಕನ್ನಡದ ಕಲಾವಿದರೂ ಮಿಂಚಿದ್ದರು.
ಮಂಡ್ಯದ ಹುಡುಗ, ಕನ್ನಡದ ರಾಕಿಂಗ್ ಸ್ಟಾರ್ ಯಶ್ ಈಗ ‘ಕೆಜಿಎಫ್’ ಸರಣಿ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಮಾತ್ರವಲ್ಲದೆ, ಬಾಲಿವುಡ್‌ನವರನ್ನೇ ತಾವಿದ್ದ ಬಳಿ ಕರೆಸಿಕೊಂಡು ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಆದ್ದರಿಂದ ಅವರ ಉಪಸ್ಥಿತಿ ಅಂಬಾನಿ ಕುಟುಂಬದ ಮದುವೆಯ ಸ್ಟಾರ್‌ಗಿರಿಯನ್ನು ಹೆಚ್ಚಿಸಿದೆ.
ಅವರು ಮುಂಬಯಿಯಲ್ಲಿ ಪತ್ನಿ, ನಟಿ ರಾಧಿಕಾ ಪಂಡಿತ್ ಜತೆಗೆ ಮದುವೆಗೆ ಹೋಗುವ ಫೋಟೊ ನೋಡಿಯೇ ಸಂಭ್ರಮಿಸಿದ ಅವರ ಅಭಿಮಾನಿಗಳು, ಮದುವೆ ಮನೆಯಲ್ಲಿ ಯಶ್ ಲುಕ್ ಮತ್ತು ಖದರ್ ನೋಡಿ, ನಮ್ಮ ರಾಕಿಭಾಯ್ ಇಡೀ ಬಾಲಿವುಡ್‌ನವರನ್ನೇ ತಿಂದು ಹಾಕಿದರು ಎಂಬಿತ್ಯಾದಿ ಕಾಮೆಂಟ್ ಹಾಕಿದ್ದಾರೆ.
ಚಂದವಾಗಿ ಮಿಂಚಿದ್ದಾರೆ ರಾಧಿಕಾ ಪಂಡಿತ್ ಅವರು ಕೂಡ. ಅವರನ್ನು ನೋಡಿ ಲಕ್ಷ್ಮಿಯ ರೂಪ ಎಂದು ಹಾಡಿ ಹೊಗಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.