ಸಿನಿಮಾ ಶೂಟಿಂಗ್ ಇದ್ದರು ಕೂಡ ಹೆಂಡತಿ ಪಕ್ಕ ಕೂತು ಯುಗಾದಿ ಹಬ್ಬ ಆಚರಿಸಿದ ಯಶ್; ಇದಲ್ಲವೇ ಹಿಂದೂತ್ವ

 | 
Uu

ಕೆಜಿಎಫ್ ಸಿನಿಮಾದ ನಂತರ ಯಶ್ ಗೊತ್ತಿಲ್ಲದವರೆ ಇಲ್ಲ. ಸಾಮಾನ್ಯ ಕುಟುಂಬದಿಂದ ಬಂದ ನಟ ಇಂದು ಎಲ್ಲರ ಅಚ್ಚುಮೆಚ್ಚಿನ ನಟನಾಗಿದ್ದಾನೆ. ರಾಕಿಂಗ್​ ಸ್ಟಾರ್​ ಯಶ್​ ಅವರ ಕುಟುಂಬದಲ್ಲಿ ಯುಗಾದಿ ಆಚರಣೆ ಹೇಗಿತ್ತು ಎಂಬುದಕ್ಕೆ ಒಂದಿಷ್ಟು ಫೋಟೋಗಳೇ ಸಾಕ್ಷಿ. ರಾಧಿಕಾ ಪಂಡಿತ್​ ಅವರ ಎಲ್ಲರಿಗೂ ಹಬ್ಬದ ವಿಶ್​ ಮಾಡಿದ್ದಾರೆ.

ಎಲ್ಲೆಡೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ನಟಿ ರಾಧಿಕಾ ಮತ್ತು ನಟ ಯಶ್​ ಅವರ ಮನೆಯಲ್ಲಿಯೂ ಸಡಗರ ತುಂಬಿದೆ. ಆ ಫೋಟೋಗಳನ್ನು ರಾಧಿಕಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್​ ಅವರು ಖುಷಿಖುಷಿಯಾಗಿ ಹಬ್ಬ ಮಾಡಿದ್ದಾರೆ. ಯುಗಾದಿ ಸಲುವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಯಶ್​-ರಾಧಿಕಾ ದಂಪತಿಯ ಮಕ್ಕಳು ಕೂಡ ಹಬ್ಬದ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಒಟ್ಟಾರೆ ಅವರ ಮನೆಯಲ್ಲಿ ಸಡಗರದಿಂದ ಯುಗಾದಿ ಆಚರಿಸಲಾಗಿದೆ. ಅಭಿಮಾನಿಗಳು ಕಮೆಂಟ್​ ಮೂಲಕ ಯಶ್​-ರಾಧಿಕಾ ಫ್ಯಾಮಿಲಿಗೆ ವಿಶ್​ ಮಾಡಿದ್ದಾರೆ. ಯಶ್ ಮಗಳು ಐರಾ ಲಂಗ ದಾವಣಿಯಲ್ಲಿ ಮಿಂಚಿದ್ದಾಳೆ.

ಪ್ರತಿ ಹಬ್ಬವನ್ನೂ ಯಶ್​-ರಾಧಿಕಾ ಪಂಡಿತ್ ಅವರು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಈ ವರ್ಷ ಸಂಕ್ರಾಂತಿ ಹಬ್ಬದ ಸಂಭ್ರಮ ಕೂಡ ಅವರ ಮನೆಯಲ್ಲಿ ಜೋರಾಗಿತ್ತು. ಆ ಸಂದರ್ಭದ ಫೋಟೋಗಳೂ ವೈರಲ್​ ಆಗಿದ್ದವು.ಯಶ್​ ಅವರು ಕೆಜಿಎಫ್​: ಚಾಪ್ಟರ್​ 2 ಬಳಿಕ ಹೊಸ ಸಿನಿಮಾ ತೆರೆಗೆ ಬಂದಿಲ್ಲ. ಮುಂದಿನ ಪ್ರಾಜೆಕ್ಟ್​ಗಾಗಿ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆ ಬಿಡುವಿನಲ್ಲಿ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.