ಯಶ್ PA ಮಗುವಿನ ನಾಮಕರಣಕ್ಕೆ ಒಂದು ಕೋಟಿ ಬೆಲೆಯ ಚಿನ್ನದ ಸರ ಗಿಫ್ಟ್, ಮೆಚ್ಚುಗೆ ಹೊರಹಾಕಿದ ಕನ್ನಡಿಗರು

 | 
Ghu

ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ತನ್ನ ಶೆಡ್ಯೂಲ್ ನಡುವೆ ಆಪ್ತ ಸಹಾಯಕನ ಮನೆಗೆ ಸರ್ಪ್ರೈಸ್ ಆಗಿ ಯಶ್ ಭೇಟಿ ನೀಡಿದ್ದು, ಮುದ್ದು ಕಂದನಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ.ರಾಕಿಭಾಯ್ ಯಶ್ ತನ್ನ ಜೊತೆ ಸದಾ ನಿಲ್ಲುವ ಸಿಬ್ಬಂದಿಗಳನ್ನೂ ಎಂದಿಗೂ ಮರೆಯೋದಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಆಪ್ತ ಸಹಾಯಕನ ಮನೆಗೆ ಯಶ್ ದಂಪತಿ ಸರ್ಪ್ರೈಸ್ ವಿಸೀಟ್ ನೀಡಿದ್ದಾರೆ.

ಕಳೆದ 10 ವರ್ಷಗಳಿಂದ ತಮಗೆ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಚೇತನ್ ಅವರ ಮನೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಭೇಟಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಚೇತನ್ ಅವರು ತಂದೆ ಸ್ಥಾನಕ್ಕೆ ಬಡ್ತಿ ಪಡೆದಿದ್ದರು. ಹೀಗಾಗಿ ಯಶ್ ಅವರು ಪತ್ನಿ ಸಮೇತ ಚೇತನ್ ಮನೆಗೆ ಭೇಟಿ ನೀಡಿದ್ದಾರೆ.ಚೇತನ್ ದಂಪತಿಗೆ ಯಶ್ ದಂಪತಿ ಸರ್ಪ್ರೈಸ್ ನೀಡಿದ್ದಾರೆ. ಈ ಸರ್ಪ್ರೈಸ್ ನೋಡಿ ಚೇತನ್ ಕುಟುಂಬ ತುಂಬ ಖುಷಿ ಪಟ್ಟಿದೆ. 

ಇನ್ನು ಮಗು, ತಾಯಿ ಆರೋಗ್ಯ ವಿಚಾರಿಸಿದ ಯಶ್ ಅವರು ಮಗುವಿಗೆ ಬಂಗಾರದ ಸರವನ್ನು ಕೂಡ ಹಾಕಿದ್ದಾರೆ.ಕೆಲ ದಿನಗಳ ಹಿಂದೆ ಯಶ್ ಅವರು ತಮ್ಮ ಸೆಕ್ಯುರಿಟಿಯ ಜನ್ಮದಿನವನ್ನು ಆಚರಿಸಿದ್ದರು. ಈಗ ಅಸಿಸ್ಟಂಟ್ ಮನೆಗೆ ಭೇಟಿ ಕೊಡೋದನ್ನು ಮರೆತಿಲ್ಲ. ಯಶ್ ಅವರು ನಾಟಕ, ಧಾರಾವಾಹಿಗಳಲ್ಲಿ ನಟಿಸಿ ಇಂದು ನ್ಯಾಶನಲ್ ಸ್ಟಾರ್ ಆಗಿದ್ದಾರೆ. ಆದರೆ ಅವರು ಬಂದ ದಾರಿಯನ್ನು ಮರೆತಿಲ್ಲ.

ಆಪ್ತ ಸಹಾಯಕ ಚೇತನ್ ಮಗು ನೋಡಲು ಚೇತನ್ ಮನೆಗೆ ಹೋದ ಯಶ್ ಹಾಗೂ ರಾಧಿಕಾ ಪಂಡಿತ್ ಆಗಮಿಸಿದ್ರು. ಮಗುವನ್ನು ನಟ ಯಶ್ ತೊಡೆಯ ಮೇಲೆ ಮಲಗಿಸಿಕೊಂಡು ಮುದ್ದಾಡಿದ್ದಾರೆ.ಮನೆಗೆ ಬಂದ ಯಶ್ ದಂಪತಿಯನ್ನು ಕಂಡು ಆಪ್ತ ಸಹಾಯಕ ಫುಲ್ ಖುಷ್ ಆಗಿದ್ದಾರೆ. ನಿನ್ನೆ ಯಶ್ ಹಾಗೂ ರಾಧಿಕಾ ಪಂಡಿತ್, ಚೇತನ್ ಅವರ ಮನೆಗೆ ಭೇಟಿ ನೀಡಿದ್ರು. ಮಗುವಿಗೆ ದುಬಾರಿ ಗಿಫ್ಟ್ ಕೂಡ ನೀಡಿದ್ದಾರೆ.

ನಿರ್ದೇಶಕಿ ಗೀತು ಮೋಹನ್​ ದಾಸ್ ಜೊತೆ ನಟ ಯಶ್​ ಟಾಕ್ಸಿಕ್ ಸಿನಿಮಾ ಮಾಡ್ತಿದ್ದಾರೆ. ಕೆಜಿಎಫ್​ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್  ಸದ್ಯ ಟಾಕ್ಸಿಕ್ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದರೂ ಕೂಡ ಹಳೆಯದನ್ನು ಮರೆತಿಲ್ಲ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.