ಹೌದು ನಾನು ಅನುಶ್ರೀನಾ ಮದುವೆ ಆಗ್ತೀನಿ; ಮೀಡಿಯಾ ಪ್ರಶ್ನೆಗೆ ರಕ್ಷಿತ್ ಶೆಟ್ಟಿ ಸಿಹಿಸುದ್ದಿ

 | 
Yuu
ನಗು ಮೊಗದ ಚೆಲುವೆ ಅನುಶ್ರೀ ಮದುವೆ ವದಂತಿ ಹಬ್ಬಿದ್ದು ಇದೇನೂ ಮೊದಲಲ್ಲ. ಹಿಂದೆಯೂ ಅನೇಕ ಬಾರಿ ಈ ರೀತಿಯ ಗಾಳಿಸುದ್ದಿಗಳು ಕೇಳಿಬಂದಿದೆ. ಇನ್ನೂ ನಟ ರಕ್ಷಿತ್‌ ಶೆಟ್ಟಿ ಸ್ಯಾಂಡಲ್‌ವುಡ್‌ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಆಗಿದ್ದಾರೆ. ಇವರ ಫ್ಯಾನ್ಸ್‌ ಕೂಡ ರಕ್ಷಿತ್‌ ವಿವಾಹ ನೋಡಲು ಕಾದು ಕುಳಿತಿದ್ದಾರೆ.
ಈ ಮಧ್ಯೆ ಸೋಷಿಯಲ್‌ ಮೀಡಿಯಾದಲ್ಲಿ ಒಂದು ಫೋಟೋ ವೈರಲ್‌ ಆಗಿದ್ದು, ಇದರಲ್ಲಿ ರಕ್ಷಿತ್‌ ಶೆಟ್ಟಿ ಮತ್ತು ಅನುಶ್ರೀ ವಧು - ವರರಂತೆ ಕಾಣುತ್ತಿದ್ದಾರೆ. ರಕ್ಷಿತ್‌ ಕೈ ಯಲ್ಲಿ ತಾಳಿಯೂ ಇದೆ. ಈ ವೈರಲ್‌ ಫೋಟೋ ನೋಡಿದವರಿಗೆ ಸಹಜವಾಗಿಯೇ ಇವರಿಬ್ಬರೂ ಮದುವೆಯಾಗ್ತಿದ್ದಾರೆ ಎಂದು ಅನಿಸುತ್ತದೆ. ಆಂಕರ್‌ ಅನುಶ್ರೀ ಮತ್ತು ನಟ ರಕ್ಷಿತ್‌ ಶೆಟ್ಟಿ ಮದುವೆಯಾಗಿದ್ದಾರೆ ಎಂದು ವದಂತಿ ಹರಡಲಾಗ್ತಿದೆ. 
ಆದರೆ ಅಸಲಿ ವಿಚಾರವೇ ಬೇರೆಯಾಗಿದೆ. ಆಂಕರ್‌ ಅನುಶ್ರೀ ಮತ್ತು ನಟ ರಕ್ಷಿತ್‌ ಶೆಟ್ಟಿ ಮದುವೆಯ ಈ ಫೋಟೋ ಎಡಿಟ್‌ ಆಗಿದೆ. ಇಬ್ಬರ ಫೋಟೋವನ್ನು ತೆಗೆದುಕೊಂಡು ಈ ರೀತಿ ಎಡಿಟ್‌ ಮಾಡಲಾಗಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ ಆಗಿದೆ. ಇನ್ನು ಇಷ್ಟು ದಿನ ನಾನು ಮದುವೆ ಬಗ್ಗೆ ಸ್ಪಷ್ಟ ಹೇಳಿಕೆ ನೀಡದ ನಟಿ ಕೊನೆಗೂ ಮದುವೆ ಕುರಿತು ಮಾಹಿತಿ ನೀಡಿದ್ದಾರೆ. ಮದುವೆ ಕುರಿತು ತಮ್ಮ ಅಭಿಮಾನಿಗಳಿಗೆ ನಿರೂಪಕಿ ಅನುಶ್ರೀ ಅವರು ಗುಡ್‌ ನ್ಯೂಸ್‌ ನೀಡಿದ್ದಾರೆ.
 ಇಷ್ಟು ದಿನ ಮದುವೆ ಆಗಲೋ ಬೇಡವೋ ಎಂದು ಯೋಚಿಸಿ ತೂಗುಯ್ಯಾಲೆ ಆಡುತ್ತಿದ್ದ ನಟಿ, ನಿರೂಪಕಿ ಅನುಶ್ರೀ ಕೊನೆಗೂ ಮದುವೆ ಆಗಲು ಒಪ್ಪಿಕೊಂಡಿದ್ದಾರೆ.
ನನಗೆ ಇದು ಎರಡನೇ ಅಥವಾ ಮೂರನೇ ಮದುವೆ ಅಲ್ಲ. ನನಗೆ ಇನ್ನೂ ಮದುವೆಯೇ ಆಗಿಲ್ಲ ಎಂದು ಆಂಕರ್‌ ಅನುಶ್ರೀ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಿಂದೆ ನನಗೆ ಬಹಳಷ್ಟು ಜನರು ಈಗಾಗಲೇ ಮದುವೆ ಮಾಡಿಸಿಬಿಟ್ಟಿದ್ದೀರಿ. 
ಒಮ್ಮೆ ನಟ ರಕ್ಷಿತ್ ಶೆಟ್ಟಿ ಜೊತೆ ಮದುವೆ ಮಾಡಿಸಿದ್ದೀರಿ. ಇನ್ನೊಮ್ಮೆ ನನ್ನ ಕಸಿನ್ ಗಂಡನ ಜೊತೆಯಲ್ಲೂ ಆಗಿಹೋಗಿದೆಯಂತೆ. ಅದನ್ನು ನನ್ನ ಕಸಿನ್ ಕಾಲ್ ಮಾಡಿ ಹೇಳಿ ನಕ್ಕಿದ್ದಾಳೆ. ಆದರೆ, ನನಗೆ ನಿಜವಾಗಿಯೂ ಮದುವೆ ಆಗಿಲ್ಲ ಎಂದು ತಿಳಿಸಿದ್ದಾರೆ.