ನನ್ನ ಮಗುವಿಗೆ ನೀನೇ ಅಪ್ಪ, ಹೊಸ‌ ಟ್ವಿಸ್ಟ್ ಕೊಟ್ಟ ಸಮಂತಾ ರುತ್ ಪ್ರಭು

 | 
Nd
ನಾಗ ಚೈತನ್ಯ ಎರಡನೇ ಮದುವೆಯ ಬಳಿಕ ಸಮಂತಾ ರುತ್‌ ಪ್ರಭು ಸಹ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದಲ್ಲದೇ ಮಗು ಪಡೆಯಲು ವಯಸ್ಸು ಮ್ಯಾಟರ್‌ ಆಗಲ್ಲ ಎಂದು ಸಮಂತಾ ಹೇಳಿದ್ದರು. ಸಮಂತಾ ಇತ್ತೀಚೆಗೆ ಬಾಲಿವುಡ್‌ ನಿರ್ದೇಶಕರೊಬ್ಬರ ಜೊತೆ ಕಾಣಿಸಕೊಂಡ ವಿಡಿಯೋ ವೈರಲ್‌ ಆಗುತ್ತಿದೆ. ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಎಲ್ಲದರ ನಡುವೆ ನೀನೊಬ್ಬ ಶ್ರೇಷ್ಠ ವ್ಯಕ್ತಿ, ನಮ್ಮ ಸುಂದರ ಮಗುವಿಗೆ ಪರಿಪೂರ್ಣ ತಂದೆ ಎಂದು  ಸಮಂತಾ ಭಾವುಕರಾಗಿ ಹೇಳುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸಮಂತಾ ಅವರ ಈ ಪೋಸ್ಟ್‌ ಭಾರೀ ವೈರಲ್‌ ಆಗಿದೆ. ಸಮಂತಾ ರುತ್ ಪ್ರಭು ಗುಟ್ಟಾಗಿ ಎರಡನೇ ಮದುವೆ ಆದ್ರಾ? ಸಮಂತಾ ಗರ್ಭಿಣಿಯಾಗಿದ್ದಾರಾ? ಅವರು ಈ ರೀತಿ ಇಷ್ಟೊಂದು ಭಾವುಕರಾಗಿ ಹೇಳಿದ್ದು ಯಾರಿಗೆ ಎಂದು ಪ್ರಶ್ನೆಗಳು ಉದ್ಭವಿಸಿವೆ. ಆದರೆ ಅಸಲಿ ಸತ್ಯವೇ ಬೇರೆ ಇದೆ.
ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರ ವಿವಾಹದ ಹಳೆಯ ವೀಡಿಯೊ ಇದಾಗಿದೆ. ಈ ವಿಡಿಯೋ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ 2017ರಲ್ಲಿ ಅಕ್ಟೋಬರ್ 6 ರಂದು ಹಿಂದೂ ಆಚರಣೆಗಳ ಪ್ರಕಾರ ಮತ್ತು ಅಕ್ಟೋಬರ್ 7 ರಂದು ಕ್ರಿಶ್ಚಿಯನ್ ಪದ್ಧತಿಗಳ ಪ್ರಕಾರ ಗೋವಾದಲ್ಲಿ ವಿವಾಹವಾದರು. ನಾಲ್ಕು ವರ್ಷಗಳ ನಂತರ ಅಕ್ಟೋಬರ್ 2, 2021 ರಂದು ವಿಚ್ಛೇದನ ಪಡೆದರು.
ಅವರ ಸಿನಿಮಾದಿಂದ ಹಿಡಿದು ತಮ್ಮ ವೈಯಕ್ತಿಕ ಸಮಯದಲ್ಲಿ ಅವರು ಹೇಗಿರುತ್ತಾರೆ ಎನ್ನುವುದನ್ನು ಕೂಡಾ ತುಂಬಾ ಸಲ ಶೇರ್ ಮಾಡುತ್ತಾರೆ. ನಟಿ ತಮ್ಮ ಜೀವನ ಶೈಲಿಯಿಂದಲೇ ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತಲೇ ಇದ್ದಾರೆ.ಇತ್ತೀಚೆಗೆ ಸಿಟಾಡೆಲ್: ಹನಿ ಬನ್ನಿ ನಟಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ತಮ್ಮ ಸುಂದರವಾದ ಭಕ್ತಿ ತುಂಬಿದ ಬೆಳಗಿನ ಒಂದು ಲುಕ್ ಶೇರ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಮಂತಾ ರುತ್ ಪ್ರಭು ಕೆಲವು ಫೋಟೋಸ್ ಶೇರ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.