ಖ್ಯಾತ ಹಾಸ್ಯ ನಟ ಸಿಹಿಕಹಿ ಚಂದ್ರು ಅವರ ಲವ್ ಸ್ಟೋರಿ ಕೇಳಿದ್ರೆ ಬೆಚ್ಚಿಬೀಳ್ತೀರಾ, ಕೊನೆಗೆ ಮದ್ವೆ ಆಗಿದ್ದು ಇವರನ್ನೇ

 | 
Gu
 ಭರ್ಜರಿ ಭೋಜನ, ಬೊಂಬಾಟ್ ಭೋಜನ ಮೂಲಕ ಫೇಮಸ್ ಆಗಿರುವ ನಟ ಅಂದ್ರೆ ಅದು ಚಂದ್ರಶೇಖರ್ ಅವರು. ಅರೇ ಅವರ್ಯಾರು ಅಂದುಕೊಂಡರಾ ಚಂದ್ರಶೇಖರ್ ಅವರಿಗೆ ಸಿಹಿ ಕಹಿ ಚಂದ್ರು ಎಂಬ ಹೆಸರು ಹೇಗೆ ಬಂತು ಅಂತೀರಾ? ಭಾರತದಲ್ಲೇ ಪ್ರಾದೇಶಿಕ ಭಾಷೆಯಲ್ಲಿ ಪ್ರಸಾರಕಂಡ ಮೊದಲ ಕನ್ನಡ ಧಾರಾವಾಹಿ ‘ಸಿಹಿ ಕಹಿ’. 
ಬೆಂಗಳೂರು ದೂರದರ್ಶನದಿಂದಲೇ ಪ್ರಸಾರವಾದ ಮೊದಲ ಧಾರಾವಾಹಿ ‘ಸಿಹಿ ಕಹಿ’. ಇದೇ ಸೀರಿಯಲ್‌ನಲ್ಲಿ ಚಂದ್ರಶೇಖರ್ ಹಾಗೂ ಗೀತಾ ಅಭಿನಯಿಸಿದ್ದರು ಹಾಗೂ ಖ್ಯಾತಿ ಪಡೆದಿದ್ದರು. ಹೀಗಾಗಿ, ‘ಸಿಹಿ ಕಹಿ’ ಚಂದ್ರು ಹಾಗೂ ‘ಸಿಹಿ ಕಹಿ’ ಗೀತಾ ಎಂಬ ಹೆಸರಿನಿಂದಲೇ ಇಬ್ಬರೂ ಜನಪ್ರಿಯತೆ ಪಡೆದರು.ಆ ಕಾಲದಲ್ಲಿ ಬರುತ್ತಿದ್ದ ಒಂದೇ ಒಂದು ವಾಹಿನಿ ದೂರದರ್ಶನ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ‘ಸಿಹಿ ಕಹಿ’. ಈ ಸೀರಿಯಲ್‌ನಲ್ಲಿ ನಟಿಸಿದ ಚಂದ್ರು ಮತ್ತು ಗೀತಾ ಪ್ರೀತಿಸಿ, ವಿವಾಹವಾದರು. 
ತಮ್ಮ ಮದುವೆ ಬಗ್ಗೆ ಸಿಹಿ ಕಹಿ ಚಂದ್ರು ಹೇಳಿದ್ದು ಹೀಗೆ ಸಿಹಿ ಕಹಿ’ ಧಾರಾವಾಹಿಯಲ್ಲಿ ಪ್ರೇಮಾಂಕುರವಾಗಿ, ಗೀತಾಳನ್ನ ಮದುವೆ ಮಾಡಿಕೊಳ್ಳಬೇಕು ಅಂತ ತೀರ್ಮಾನ ಮಾಡಿದೆ. ನಮ್ಮ ಮನೆಯಲ್ಲಿ ಸಮಸ್ಯೆ ಇರಲಿಲ್ಲ. ಅವರ ಮನೆಯಲ್ಲಿ ಅಮ್ಮ ಒಪ್ಪಲಿಲ್ಲ. ಆಮೇಲೆ ಕನ್ವಿನ್ಸ್ ಮಾಡಿದ್ವಿ. ನಾನು ಮದುವೆ ಮಾಡಿಕೊಂಡರೆ ಒಂದು ಮನೆಯನ್ನ ಭೋಗ್ಯಕ್ಕೆ ಹಾಕಿಕೊಳ್ಳಬೇಕು ಅಂತ ಆಸೆ ಇತ್ತು. ನನ್ನ ಅಂಕಲ್ ಮನೆಯನ್ನೇ ನೋಡಿದ್ದೆ.
 ಅದಕ್ಕಾಗಿ 40 ಸಾವಿರ ರೂಪಾಯಿ ಹೊಂದಿಸಿದ್ದೆ. ಗೀತಾ ಕೈಯಿಂದ 40 ಸಾವಿರ ರೂಪಾಯಿಯನ್ನ ಅಡ್ವಾನ್ಸ್ ಆಗಿ ಅಂಕಲ್‌ಗೆ ಕೊಡಿಸಬೇಕು ಅಂತ ಆಸೆ ಇತ್ತು. ಅಂಕಲ್ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದೆ ಅಂತ ಸುಳ್ಳು ಹೇಳಿ ಗೀತಾಳನ್ನ ಕರೆದುಕೊಂಡು ಹೋಗಿ ಅಡ್ವಾನ್ಸ್ ಕೊಡಿಸಿದ್ದೆ.ಸಿಹಿ ಕಹಿ’ ಆದ್ಮೇಲೆ ನನಗೆ ತುಂಬಾ ದಿನ ಕೆಲಸ ಇರಲಿಲ್ಲ. ಸಿನಿಮಾಗಳಲ್ಲಿ ಒಂದೊಂದು ಸೀನ್ ಆಕ್ಟ್ ಮಾಡುತ್ತಿದ್ದೆ.
 ಅದರಲ್ಲಿ ಊಟ ಸಿಗೋದು ಬಿಟ್ಟರೆ ಸಂಪಾದನೆ ಇರಲಿಲ್ಲ. ದುಡ್ಡೇ ಇರಲಿಲ್ಲ. ಹೇಗೆ ಜೀವನ ಮಾಡೋದು ಅಂತ ಅನಿಸುತ್ತಿತ್ತು. ಆಗ ರೇಣುಕಾ ಶರ್ಮಾ ಅವರನ್ನ ಭೇಟಿ ಮಾಡಿದೆ. ಆಗ ಅವರು ‘ಅಂಜದ ಗಂಡು’ ಸಿನಿಮಾ ಮಾಡುತ್ತಿದ್ದರು. ಆ ಸಿನಿಮಾದಲ್ಲಿ ಆಲ್ಮೋಸ್ಟ್ ಎಲ್ಲರಿಗೂ ನಾನೇ ವಾಯ್ಸ್ ಕೊಟ್ಟಿರೋದು. ವಾಯ್ಸ್ ಚೇಂಜ್ ಮಾಡಿ, ಬೇರೆ ಬೇರೆ ವಾಯ್ಸ್‌ನಲ್ಲಿ ಡಬ್ಬಿಂಗ್ ಮಾಡಿದ್ದೆ. ಆಗ ನನಗೆ ಅವರು 2500 ರೂಪಾಯಿ ಪೇಮೆಂಟ್ ಕೊಟ್ಟಿದ್ದರು ಎಂದರು ಸಿಹಿ ಕಹಿ ಚಂದ್ರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.