ಇನ್ನು ಯಾವ ಕಾರಣಕ್ಕೂ ನಾನು ನಿನಗೆ ಸಿಗಲ್ಲ, ಮೌನ ಮುರಿದ ರಚಿತಾ ರಾಮ್

 | 
Ji
ಕನ್ನಡದ ಸೂಪರ್ ಸ್ಟಾರ್ ನಟಿ ಅಂದ್ರೆ ಅದು ರಚಿತಾ ರಾಮ್ ನಟಿ ರಚಿತಾ ರಾಮ್ ಅವರಿಗೆ ಈಗ 32 ವರ್ಷ ವಯಸ್ಸು. ಈವರೆಗೆ ಅವರು ವಿವಾಹ ಆಗಿಲ್ಲ. ಚಿತ್ರರಂಗದಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೈ ತುಂಬಾ ಸಿನಿಮಾ ಇರೋ ಕಾರಣಕ್ಕೆ ಸದ್ಯಕ್ಕಂತೂ ಅವರು ವಿವಾಹದ ಬಗ್ಗೆ ಆಲೋಚಿಸಿಲ್ಲ. ಈಗ ಅವರು ಒಂದು ಮಾತನ್ನು ನೇರವಾಗಿ ಹೇಳಿದ್ದಾರೆ. ಎಷ್ಟೇ ವರ್ಷ ನನ್ನ ಹಿಂದೆ ಬಂದರೂ ನಾನು ನಿಮಗೆ ಬೀಳಲ್ಲ ಎಂದಿದ್ದಾರೆ.
ಜೀ ಕನ್ನಡದಲ್ಲಿ ‘ಭರ್ಜರಿ ಬ್ಯಾಚುಲರ್ಸ್’ ಆರಂಭ ಆಗುತ್ತಿದೆ. ಇದಕ್ಕೆ ರಚಿತಾ ರಾಮ್ ಅವರು ಜಡ್ಜ್​ ಸ್ಥಾನದಲ್ಲಿ ಇದ್ದಾರೆ. ಇದರ ಪ್ರೋಮೋನ ಜೀ ಕನ್ನಡ ಹಂಚಿಕೊಂಡಿದೆ. ಭಿನ್ನವಾಗಿ ಈ ಪ್ರೋಮೋನ ಮಾಡಲಾಗಿದ್ದು, ಗಮನ ಸೆಳೆದಿದೆ. ತಮ್ಮನ್ನು ಬೀಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದವರಿಗೆ ಅವರು ನೇರ ಮಾತುಗಳಲ್ಲಿ ಹೇಳಿದ್ದಾರೆ.
10 ಸಾವಿರ ವರ್ಷಗಳ ಹಿಂದೆ ಸುಂದರಿಯನ್ನು ಪಟಾಯಿಸಲು ಆದಿ ಮಾನವ ಗಾಲಿಯನ್ನು ಕಂಡು ಹಿಡಿದ. ಗಾಲಿ ಮನದಾಳದ ಬದಲು ಪಾತಾಳಕ್ಕೆ ಇಳಿಯಿತು. ಪ್ರೀತಿಯ ಕಿಚ್ಚು ಹಚ್ಚಲು ಬಂದವ ಬೆಂಕಿಯಲ್ಲಿ ಮರೆಯಾಗಿ ಹೋದ. ಹೂವು ತಂದವ ಮಿಂಚಿನಂತೆ ಮರೆಯಾದ. ಇವರ ಪ್ರೀತಿಯ ಹಸಿವು ಸ್ವಯಂವರಕ್ಕೂ ಕಾಲಿಟ್ಟಿತು. ಕಾಡಿನಿಂದ ನಾಡಿಗೆ ಬಂದರೂ ಬ್ಯಾಚುಲರ್​ಗಳಾಗಿಯೇ ಉಳಿದರು ಎಂದು ಪ್ರೋಮೋದಲ್ಲಿ ಹೇಳಲಾಗಿದೆ.
ಡ್ರೋನ್ ಪ್ರತಾಪ್, ಹುಲಿ ಪ್ರತಾಪ್, ಉಲ್ಲಾಸ್, ಪ್ರವೀಣ್ ಜೈನ್ ಮೊದಲಾದವರು ‘ಭರ್ಜರಿ ಬ್ಯಾಚುಲರ್ಸ್’ ಶೋನ ಭಾಗವಾಗಲಿದ್ದಾರೆ. ಈ ಬಾರಿ ಈ ರಿಯಾಲಿಟಿ ಶೋ ಯಾವ ರೀತಿಯಲ್ಲಿ ಮನರಂಜನೆ ನೀಡಲಿದೆ ಎನ್ನುವ ಕುತೂಹಲ ಮೂಡಿದೆ. ರಚಿತಾ ರಾಮ್ ಹಾಗೂ ರವಿಚಂದ್ರನ್ ಜಡ್ಜ್ ಸ್ಥಾನದಲ್ಲಿ ಇರೋದ್ರಿಂದ ಮನರಂಜನೆ ಡಬಲ್ ಆಗೋದು ಗ್ಯಾರಂಟಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.