ಯುವ ರಾಜ್ ಕುಮಾರ್ ಡಿ ವೋರ್ಸ್; ಪುನೀತ್ ಪತ್ನಿ ಅಶ್ವಿನಿ ಮೇಡಂ ದೊಡ್ಡ ತೀರ್ಮಾಣ

 | 
Je
ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಇದೀಗ ವೈವಾಹಿಕ ಬಂಧ ಮುರಿದು, ಶ್ರೀದೇವಿ ಅವರಿಂದ ದೂರ ಆಗಲು ನಿರ್ಧರಿಸಿದ್ದಾರೆ. ಆದರೆ ಈ ಸುದ್ದಿ ಇದೀಗ ಇಡೀ ದೊಡ್ಮನೆ ಅಂದ್ರೆ ಡಾ. ರಾಜ್‌ಕುಮಾರ್ ಅವರ ಕುಟುಂಬಕ್ಕೆ ಆಘಾತ ನೀಡಿದೆ. ಹಾಗೇ ಇಬ್ಬರು ದೂರ ಆಗುತ್ತಿರುವ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ & ಅವರ ಪತ್ನಿ ಅವರಿಗೂ ಇಷ್ಟ ಇಲ್ಲ ಎನ್ನಲಾಗಿದೆ. ಈ ನಡುವೆ ಯುವ ವಿಚಾರ ತಿಳಿಯಲು ಸ್ವತಃ ಅಶ್ವಿನಿ ಪುನೀತ್ ಅವರೇ ಯುವ ರಾಜ್‌ಕುಮಾರ್ ಮನೆಗೆ ಬಂದಿದ್ದಾರೆ.
ದೊಡ್ಮನೆ ಮೊಮ್ಮಗನ ಮದುವೆ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನೆರವೇರಿಸಿತ್ತು ಕುಟುಂಬ. ಅಷ್ಟಕ್ಕೂ ಯುವ ರಾಜ್‌ಕುಮಾರ್ & ಶ್ರೀದೇವಿ ಅವರು 2018ರ ಜುಲೈ 5 ರಂದು ಮೈಸೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ರು. ಹಾಗೇ 2019ರ ಮೇ 26 ರಂದು ಯುವ ರಾಜ್‌ಕುಮಾರ್​ ಮತ್ತು ಶ್ರೀದೇವಿ ಭೈರಪ್ಪ ಅವರ ಮದುವೆ ಆಗಿತ್ತು. ರಾಜಧಾನಿ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ, ಅದ್ಧೂರಿಯಾಗಿ ಯುವ ರಾಜ್‌ಕುಮಾರ್ & ಶ್ರೀದೇವಿ ಅವರ ಮದುವೆ ಸಮಾರಂಭ ನಡೆದಿತ್ತು.
ಹೀಗೆ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮ್ಯಾರೇಜ್ ಆಗಿದ್ದ, ಯುವ ರಾಜ್‌ಕುಮಾರ್ ಅವರ ಬಾಳಲ್ಲಿ ಕೇವಲ 5 ವರ್ಷ ಕಳೆಯುವ ಒಳಗೆ ಬಿರುಗಾಳಿ ಎದ್ದಿದೆ. ಇದೇ ಸಮಯದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಯುವ ರಾಜ್ ವಿಚಾರದ ಬಗ್ಗೆ ಚರ್ಚಿಸುತ್ತಿದ್ದಾರೆ. ಹಾಗಾದ್ರೆ ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಯುವ ರಾಜ್‌ಕುಮಾರ್ ಸಂಸಾರ ಸರಿ ಮಾಡ್ತಾರಾ? ಡಿವೋರ್ಸ್ ನಿರ್ಧಾರದಿಂದ ಯುವ ರಾಜ್‌ಕುಮಾರ್ ಹಿಂದೆ ಸರಿಯುತ್ತಾರಾ? ತಿಳಿದಿಲ್ಲ.
ಅಪ್ಪು ಮಾಡಿದ್ದ ಮದುವೆ ಹೀಗೆ ಆಗಬಾರದು ಎಂದು ಬೇಸರದ ಮಾತಾಡಿದ ಅಶ್ವಿನಿ ಪುನೀತ್ ರಾಜಕುಮಾರ್ ಅಂದಹಾಗೆ ಯುವ ವಿಚಾರ ತಿಳಿಯುತ್ತಿದ್ದಂತೆಯೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ರಾಘವೇಂದ್ರ ರಾಜ್‌ಕುಮಾರ್ ಅವರ ನಿವಾಸಕ್ಕೆ ಬಂದಿದ್ದಾರೆ. ಯುವ ರಾಜ್‌ಕುಮಾರ್ ಅವರ ಡಿವೋರ್ಸ್ ವಿಚಾರವಾಗಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಈಗಾಗಲೇ ಡಾ. ರಾಜ್ ಕುಟುಂಬದ ದೊಡ್ಡ ದೊಡ್ಡವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ರಾಜಿ & ಸಂಧಾನವು ನಡೆಯುವ ಸಾಧ್ಯತೆ ದಟ್ಟವಾಗಿದೆ. 
ಹಾಗೇ ಅಭಿಮಾನಿಗಳಿಗೆ ಕೂಡ ಈ ವಿಚಾರ ಆಘಾತವನ್ನ ನೀಡಿದೆ. ಮತ್ತೊಂದು ಕಡೆ ಎಲ್ಲವೂ ಸರಿಯಾಗಿ, ಇಬ್ಬರೂ ಮತ್ತೆ ಒಟ್ಟಿಗೆ ಬದುಕಲಿ ಎಂಬ ಬೇಡಿಕೆ ಮುಂದಿಡುತ್ತಿದ್ದಾರೆ ಫ್ಯಾನ್ಸ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡಿ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.