ಈಕೆಯೇ ಬೇಕು ಎಂದು ಕಾದು ಕೂತಿದ್ದ ಯುವಿ; ಕೊನೆಗೆ ಅಣ್ಣ ಎಂದು ಕರೆದ ಆ ಚೆಲುವೆ

 | 
Hd

ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ತಂಡದ ಮಾಜಿ ಶ್ರೇಷ್ಠ ಆಲ್ರೌಂಡರ್, ಅವರು ಕೇವಲ ಕ್ರಿಕೆಟ್ ನಲ್ಲಿ ಮಾತ್ರ ಚಾಂಪಿಯನ್ ಆಗಿರಲಿಲ್ಲ. ವೈಯಕ್ತಿಕ ಜೀವನದಲ್ಲಿಯೂ ವಿಜೇತರಾದರು. ೨೦೧೧ ರ ವಿಶ್ವಕಪ್ ಸಮಯದಲ್ಲಿ ಯುವರಾಜ್ ಹೊಂದಿದ್ದ ಅಪರೂಪದ ಕ್ಯಾನ್ಸರ್ ಅನ್ನು ಸೋಲಿಸುವುದು ಸುಲಭವಾಗಿರಲಿಲ್ಲ. ಅನಾರೋಗ್ಯದ ಸಮಯದಲ್ಲಿ ರಕ್ತ ವಾಂತಿ ಮಾಡುವ ಮೂಲಕ ಸೀರಿಯಸ್ ಕಂಡೀಶನ್ ಗೆ ತಲುಪಿದರೂ ಸಹ ಯುವರಾಜ್ ಧೈರ್ಯವನ್ನು ಕಳೆದುಕೊಳ್ಳಲಿಲ್ಲ.

ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಕ್ರಿಕೆಟ್ ಲೋಕದಲ್ಲಿ ಎಷ್ಟು ಜನಪ್ರಿಯರಾಗಿದ್ದಾರೋ ಅಷ್ಟೇ ಪ್ರೀತಿ ಪ್ರೇಮ ಪ್ರಕರಣಗಳಲ್ಲೂ ಜನಪ್ರಿಯರಾಗಿದ್ದಾರೆ. ಯುವರಾಜ್ ಸಿಂಗ್ ಅವರ ಪ್ರೇಮ ಪ್ರಕರಣಗಳು ಮಾಧ್ಯಮಗಳಲ್ಲಿ ಆಗಾಗ ಚರ್ಚೆಯಾಗುತ್ತಿದ್ದವು. ಮದುವೆಗೂ ಮುನ್ನ ಯುವರಾಜ್ ಸಿಂಗ್ ಹೆಸರು ಹಲವು ಮಂದಿ ಬಾಲಿವುಡ್ ಬೆಡಗಿಯರ ಜೊತೆ ತಳುಕು ಹಾಕಿಕೊಂಡಿತ್ತು.

ಆದರೆ ಕೊನೆಗೆ ಯುವರಾಜ್ ಸಿಂಗ್ ಹೇಜಲ್ ಕೀಚ್ ಅವರನ್ನು ಸಂಗಾತಿಯನ್ನಾಗಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಅದರಲ್ಲೂ ಐಪಿಎಲ್ ಫ್ರಾಂಚೈಸಿ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಸಹ-ಮಾಲೀಕರಾದ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರೊಂದಿಗೆ ಯುವರಾಜ್ ಸಿಂಗ್ ಅವರ ಸಂಬಂಧದ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ವರದಿಗಳ ನಂತರ ಪ್ರೀತಿ ಜಿಂಟಾ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡುವ ಮೂಲಕ ಈ ವರದಿಗಳಿಗೆ ಅಂತ್ಯ ಹಾಡಿದ್ದರು.

ನಾನು ಯುವರಾಜ್ ಸಿಂಗ್ ಅವರೊಂದಿಗೆ ಎಂದಿಗೂ ಡೇಟಿಂಗ್ ಮಾಡಿಲ್ಲ ಮತ್ತು ಡೇಟಿಂಗ್ ಮಾಡುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದರು. ಆದರೆ ಮೈದಾನದಲ್ಲಿ ಎಲ್ಲರ ಮುಂದೆ ಯುವರಾಜ್ ಸಿಂಗ್ ಪ್ರೀತಿ ಜಿಂಟಾ ಎತ್ತಿ ಮುದ್ದಾಡಿದ್ದ. ಆದರೆ ಕೊನೆಗೆ ಪ್ರೀತಿ ಅಣ್ಣಾ ಎಂದು ಹೇಳಿ ಯುವರಾಜ್ ಸಿಂಗ್ ಪ್ರೀತಿಗೆ ಫುಲ್ ಸ್ಟಾಪ್ ಹಾಕಿದ್ದರು. ಅಂತಿಮವಾಗಿ 2016ರಲ್ಲಿ ಬಾಡಿಗಾರ್ಡ್ ಚಿತ್ರದ ನಟಿ ಹೇಜೆಲ್ ಕೀಚ್ ಅವರನ್ನು ಮದುವೆಯಾಗಿದ್ದರು . 

ಈ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಯುವರಾಜ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಹ್ಯಾಝೆಲ್ ಅವರೊಂದಿಗಿನ ಸಂಬಂಧವನ್ನು ದೃಢಪಡಿಸಿದರು. ಸಂದರ್ಶನವೊಂದರಲ್ಲಿ, ಯುವರಾಜ್ ಅವರು ಹ್ಯಾಝೆಲ್​ ತಮ್ಮ ತಾಯಿಯ ನೋಟವನ್ನು ಹೊಂದಿದ್ದಾರೆ ಎಂದು ಹೇಳಿದ್ದರು. ಇದೀಗ ಈ ಜೋಡಿಗೆ ಒಂದು ಮುದ್ದಾದ ಮಗು ಸಹ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.