ರಾಜ್ ಕುಟುಂಬದ ಕುಡಿ ಯುವರಾಜ್ ಸಂಸಾರದಲ್ಲಿ ಬಿರುಕು; ಪತ್ನಿಗೆ ಡಿವೋರ್ಸ್ ಕೊಟ್ಟ ನ ಟ

 | 
Bs

ಸ್ಯಾಂಡಲ್ ವುಡ್ ಗೆ ಆದ್ಯಾರ ದೃಷ್ಟಿ ಬಿದ್ದಿದೆ ಅರಿವಾಗುತ್ತಿಲ್ಲ. ಹೌದು ಸ್ಯಾಂಡಲ್‌ವುಡ್‌ನಲ್ಲಿ ಮೊನ್ನೆಮೊನ್ನೆಯಷ್ಟೇ ಚಂದನ್ ಶೆಟ್ಟಿ - ನಿವೇದಿತಾ ಗೌಡ ವಿಚ್ಛೇದನ ಪಡೆದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೊಂದು ಜೋಡಿಯ ವಿಚ್ಛೇದನ ಸುದ್ದಿ ಬ್ರೇಕ್ ಆಗಿದೆ. ಕನ್ನಡ ಚಿತ್ರರಂಗದ ದೊಡ್ಮನೆಯಿಂದ ವಿಚ್ಛೇದನದ ಸದ್ದು ಕೇಳಿಬಂದಿದೆ. ಯುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಯುವ ರಾಜ್‌ಕುಮಾರ್‌ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ.

 ಪತ್ನಿ ಶ್ರೀದೇವಿ ಹಾಗೂ ಯುವ ರಾಜ್‌ಕುಮಾರ್ ಬೇರೆ ಬೇರೆಯಾಗಿದ್ದಾರೆ. ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಡಾ ರಾಜ್‌ಕುಮಾರ್ ಅವರ ಫ್ಯಾಮಿಲಿಗೆ ದೊಡ್ಮನೆಯವರು ಅಂತಲೇ ಎಲ್ಲರೂ ಗೌರವದಿಂದ ಕರೆಯುತ್ತಾರೆ. ಡಾ ರಾಜ್‌ಕುಮಾರ್ ಅವರದ್ದು ತುಂಬು ಕುಟುಂಬ, ಕೂಡು ಕುಟುಂಬ. ಡಾ ರಾಜ್‌ಕುಮಾರ್ ಮತ್ತವರ ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಘವೇಂದ್ರ ಹಾಗೂ ಪುನೀತ್ ರಾಜ್‌ಕುಮಾರ್ ಸಮಾಜಕ್ಕೆ ಮಾದರಿ. ವೈಯಕ್ತಿಕ ಜೀವನದ ಕುರಿತಾಗಿ, ದಾಂಪತ್ಯ ಬದುಕಿನ ಕುರಿತಾಗಿ ದೊಡ್ಮನೆ ಫ್ಯಾಮಿಲಿ ಗಾಸಿಪ್‌ ಪಂಡಿತರಿಗೆ ಆಹಾರವಾಗಿದ್ದು ತೀರಾ ಕಡಿಮೆ. 


ಇಂತಿಪ್ಪ ದೊಡ್ಮನೆಯಿಂದ ಮೊದಲ ಬಾರಿಗೆ ವಿಚ್ಛೇದನದ ಸುದ್ದಿ ಹೊರಬಿದ್ದಿದೆ.ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್‌ಕುಮಾರ್‌ - ಶ್ರೀದೇವಿ ಬದುಕಲ್ಲಿ ಬಿರುಗಾಳಿ ಎದ್ದಿದೆ. ಡಿವೋರ್ಸ್‌ಗಾಗಿ ಯುವ ರಾಜ್‌ಕುಮಾರ್, ಶ್ರೀದೇವಿ ಕೋರ್ಟ್ ಮೆಟ್ಟಿಲೇರಿದ್ದಾರೆ.ಯುವ ರಾಜ್‌ಕುಮಾರ್ - ಶ್ರೀದೇವಿ ಮಧ್ಯೆ ಮನಸ್ತಾಪ ಉಂಟಾಗಿದ್ದು, ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು ವಿಚ್ಛೇದನಕ್ಕಾಗಿ ಜೂನ್ 6 ರಂದು ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಭಾರತೀಯ ವಿವಾಹ ಕಾಯ್ದೆ 13(1)ಅಡಿಯಲ್ಲಿ ಯುವ ರಾಜ್‌ಕುಮಾರ್ (ಗುರು ರಾಜ್‌ಕುಮಾರ್) ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಶ್ರೀದೇವಿ ಭೈರಪ್ಪ ಅವರಿಗೆ ಕೋರ್ಟ್‌ನಿಂದ ನೋಟೀಸ್ ಜಾರಿ ಮಾಡಲಾಗಿದೆ.


ಶ್ರೀದೇವಿ ಭೈರಪ್ಪ ಹಾಗೂ ಯುವ ರಾಜ್‌ಕುಮಾರ್ ಮಧ್ಯೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ, ಮನಸ್ತಾಪ ಉಂಟಾಗಿದ್ಯಂತೆ. ವಿಚ್ಛೇದನಕ್ಕೆ ಇದೇ ಕಾರಣ ಎನ್ನಲಾಗುತ್ತಿದೆ.ಶ್ರೀದೇವಿ ಭೈರಪ್ಪ ಹಾಗೂ ಯುವ ರಾಜ್‌ಕುಮಾರ್‌ 7 ವರ್ಷಗಳ ಕಾಲ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಸ್ನೇಹಿತರಾಗಿದ್ದ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರಿತು. ಇಬ್ಬರ ಪ್ರೀತಿಗೆ ಕುಟುಂಬಸ್ಥರು ಸಮ್ಮತಿ ನೀಡಿದರು. 2019ರಲ್ಲಿ ಯುವ ರಾಜ್‌ಕುಮಾರ್ - ಶ್ರೀದೇವಿ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ, ವಿಜೃಂಭವೆಯಿಂದ ನಡೆಯಿತು. ಇಡೀ ದೊಡ್ಮನೆ ಫ್ಯಾಮಿಲಿ ಹಾಗೂ ತಾರೆಯರು ಮದುವೆಗೆ ಸಾಕ್ಷಿಯಾಗಿದ್ದರು. ಇದೀಗ ತಮ್ಮ 5 ವರ್ಷಗಳ ದಾಂಪತ್ಯ ಜೀವನಕ್ಕೆ ಯುವ ರಾಜ್‌ಕುಮಾರ್ - ಶ್ರೀದೇವಿ ಅಂತ್ಯ ಹಾಡುತ್ತಿದ್ದಾರೆ.