ಡಿವೋರ್ಸ್ ಬಳಿಕ ಬಾಡಿ ಬಿಲ್ಡರ್ ಜೊತೆ ಯಜುವೇಂದ್ರ ಚಹಲ್ ಪತ್ನಿ ಮಜಾದಾಟ?
Jan 15, 2025, 13:37 IST
|

ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟರು, ಕ್ರಿಕೆಟಿಗರ ದಾಂಪತ್ಯ ಜೀವನದಲ್ಲಿ ಬಿರುಕು ಎನ್ನುವ ಸುದ್ದಿಗಳು ಸಾಕಷ್ಟು ಕೇಳಿಬರುತ್ತಿವೆ. ಕೆಲವು ಈಗಾಗಲೇ ವಿಚ್ಛೇದನದಲ್ಲಿ ಅಂತ್ಯವಾಗಿದೆ. ಇದೀಗ ಮತ್ತೊಬ್ಬ ಭಾರತೀಯ ಕ್ರಿಕೆಟಿಗನ ಜೀವನದಲ್ಲಿ ಬಿರುಗಾಳಿ ಎಬ್ಬಿದ್ದು, ಶೀಘ್ರದಲ್ಲೇ ಬೇರೆಯಾಗಲಿದ್ದಾರೆ ಎಂದು ಕೇಳಿಬರ್ತಿದೆ.
ಸ್ನೇಹಿತರೇ...ಹಾರ್ದಿಕ್ ಪಾಂಡ್ಯಾ ಬೆನ್ನಲ್ಲೇ ಇದೀಗ ಭಾರತ ಕ್ರಿಕೆಟ್ ತಂಡದ ಮತ್ತೋರ್ವ ಆಟಗಾರನ ವಿಚ್ಛೇದನ ಸುದ್ದಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಭಾರತದ ತಂಡದ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಪರಸ್ಪರ ಬೇರಾಗುತ್ತಿದ್ದಾರೆ ಎಂದು ಹೇಳಲಾಗ್ತಿದೆ.ಭಾರತ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಹಾಗೂ ಧನಶ್ರಿ ವರ್ಮಾ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹ ಹಲವು ದಿನಗಳಿಂದ ಸದ್ದು ಮಾಡ್ತಿದೆ.
ಸ್ನೇಹಿತರೇ...ಇವರಿಬ್ಬರ ವಿಚ್ಛೇದನ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹರಿದಾಡುತ್ತಿರುವಂತೆಯೇ ಇತ್ತ ಇದಕ್ಕೆ ಇಂಬು ನೀಡುವಂತೆ ಕ್ರಿಕೆಟಿಗ ಯಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ತಮ್ಮ ಇನ್ ಸ್ಟಾಗ್ರಾಂ ಖಾತೆಗಳಿಂದ ಪರಸ್ಪರ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ ಚಹಲ್ ತಾವಿಬ್ಬರೂ ಜೊತೆಗಿದ್ದ ಎಲ್ಲ ಫೋಟೋ ಮತ್ತು ವಿಡಿಯೋಗಳನ್ನೂ ಕೂಡ ಡಿಲೀಟ್ ಮಾಡಿದ್ದಾರೆ.
ಆದರೆ ಧನಶ್ರೀ ವರ್ಮಾ ಮಾತ್ರ ಚಹಲ್ರನ್ನ ಮಾತ್ರ ಅನ್ಫಾಲೋ ಮಾಡಿದ್ದರೂ ಸಧ್ಯಕ್ಕೆ ಯಾವುದೇ ಫೋಟೋಗಳನ್ನು ಡಿಲೀಟ್ ಮಾಡಿಲ್ಲ..
https://youtube.com/shorts/pgzYfSsllfg?si=3DBAwKCd9x96VTT-
ಸ್ನೇಹಿತರೇ...ಕೆಲವು ತಿಂಗಳ ಹಿಂದೆ ಧನಶ್ರೀ ತಮ್ಮ ಹೆಸರಿನ ಮುಂದೆ ಇದ್ದ ಚಹಲ್ ಹೆಸರನ್ನ ತೆಗೆದು ಹಾಕಿದ್ದರು. ಆಗಲೇ ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ಊಹಾಪೋಹಗಳಿ ಹಬ್ಬಿದ್ದವು. ಇದೀಗ ಇಬ್ಬರೂ ಪರಸ್ಪರ ಅನ್ ಫಾಲೋ ಮಾಡಿಕೊಳ್ಳುವ ಮೂಲಕ ಈ ಊಹಾಪೋಹಗಳು ಮತ್ತಷ್ಟು ಇಂಬು ನೀಡಿದೆ.ಅಂದಹಾಗೆ ಮುಂಬೈನ ದಂತವೈದ್ಯೆ ಹಾಗೂ ಕೊರಿಯೋಗ್ರಾಫರ್ ಆಗಿದ್ದ, ಧನಶ್ರೀ ಅವರ ಬಳಿ ಯುಜ್ವೇಂದ್ರ ಚಾಹಲ್ ಡ್ಯಾನ್ಸ್ ಕಲಿಯಲು ಹೋಗುತ್ತಿದ್ದರು. ಹೀಗಾಗಿ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಈ ಜೋಡಿ, ತಮ್ಮದೇ ವಿಡಿಯೋಗಳ ಮೂಲಕ ಅಭಿಮಾನಿಗಳ ಸೆಳೆದಿದ್ದರು.
ಸ್ನೇಹಿತರೇ...ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ಕಳೆದ ಕೆಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಈ ಸ್ಟಾರ್ ಜೋಡಿಯ ವಿಚ್ಛೇದನದ ವದಂತಿಗಳು ಸದ್ದು ಮಾಡುತ್ತಿರುವುದು ಇದೇ ಮೊದಲಲ್ಲ. 2023ರಲ್ಲಿ ಧನಶ್ರೀ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಚಹಾಲ್ ಅವರನ್ನು ಅನ್‌ಫೋಲೋ ಮಾಡಿದ್ದರು. ಇದು ಅವರ ಸಂಬಂಧದ ಬಗ್ಗೆ ಊಹಾಪೋಹಗಳನ್ನು ಹೆಚ್ಚಿಸಿತು.
ಇದೇ ವೇಳೆ ಚಹಾಲ್ ಒಂದು ಪೋಸ್ಟ್ ಅನ್ನು ಮಾಡಿದ್ದರು. ಫೋಸ್ಟ್‌ನಲ್ಲಿ 'ಹೊಸ ಜೀವನವು ಲೋಡ್ ಆಗುತ್ತಿದೆ' ಎಂದು ಬರೆದುಕೊಂಡಿದ್ದರು. ಇದು ಕೂಡ ವಿಚ್ಛೇದನದ ಊಹಾಪೋಹಕ್ಕೆ ಕಾರಣವಾಗಿತ್ತು. ಆದಾಗ್ಯೂ, ಆ ಸಮಯದಲ್ಲಿ ಚಹಾಲ್ ವದಂತಿಗಳನ್ನು ತಳ್ಳಿಹಾಕಿದರು. ಸುಳ್ಳು ಮಾಹಿತಿಯನ್ನು ಹರಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಇದೀಗ ಚಹಾಲ್ ಮಾಡಿರುವ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.