ಬಸ್ ಚಾಲಕನಾಗಿದ್ದ ಜಮೀರ್ ಇವತ್ತು ಕೋಟಿ ಒಡೆಯನಾಗಿದ್ದು ಹೇ ಗೆ ಗೊ ತ್ತಾ

 | 
Hu

ರಾಜಕೀಯದಲ್ಲಿ ಸುದ್ದಿಯಾಗುತ್ತಲೇ ಇರುವ ಜಮೀರ್ ಅಹಮದ್‌ ಖಾನ್ ಅವರ ಜೀವನವೇ ಹಲವರಿಗೆ ಸ್ಪೂರ್ತಿ.1966 ಆಗಸ್ಟ್‌ 1ರಂದು ಝಿಯಾವುಲ್ಲಾ ಖಾನ್‌ ಹಾಗೂ ಸೋಗ್ರಾ ಖಾನುಮ್ ದಂಪತಿ ಪುತ್ರನಾಗಿ ಜನಿಸಿದರು. ಅವರು ಓದಿದ್ದು 8ನೇ ತರಗತಿಯಾದರೂ ಯಶಸ್ವಿ ಉದ್ಯಮಿಯಾಗಿದ್ದಾರೆ. ನ್ಯಾಷನಲ್ ಟ್ರಾವೆಲ್ಸ್‌ ಎಂಬ ಖಾಸಗಿ ಬಸ್‌ ಸಂಸ್ಥೆ ಹಾಗೂ ಜಮೀರ್ ಅಹಮದ್‌ ಖಾನ್‌ ಅಸೋಸಿಯೆಟ್ಸ್‌ ಎಂಬ ಸಂಸ್ಥೆಯ ಪಾಲುದಾರರು ಹೌದು. 

ಬೆಂಗಳೂರಿನಲ್ಲಿ ನಿರ್ಮಾಣ ಆಗಿರುವ ಜಮೀರ್ ಅಹಮದ್‌ ಖಾನ್‌ ಅವರ ಭವ್ಯ ನಿವಾಸ ಸದಾ ಸುದ್ದಿಯಲ್ಲಿರುತ್ತದೆ. ಏಕೆಂದರೆ ಇಲ್ಲಿ ಇಡಿ, ಎಸಿಬಿ, ಆದಾಯ ತೆರಿಗೆ ಇಲಾಖೆಯ ದಾಳಿ ಸಾಮಾನ್ಯ ಎನ್ನುವಂತಾಗಿದೆ. ಜೆಡಿಎಸ್‌ನಿಂದಲೇ ತಮ್ಮ ರಾಜಕೀಯ ಬದುಕು ಆರಂಭಿಸಿದ ಜಮೀರ್, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದು ಕರೆಯುತ್ತಾರೆ. 

ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕವಾದ ಬಳಿಕ 2005ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ ಜಮೀರ್‌ ಅಹಮದ್‌ ಮೊದಲ ಬಾರಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

 ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್‌ - ಜೆಡಿಎಸ್ ಮೊದಲ ಮೈತ್ರಿ ಸರ್ಕಾರದಲ್ಲಿ ಹಜ್ ಮತ್ತು ವಕ್ಫ್‌ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಳಿಕ 2008, 2013ರಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಜಮೀರ್ ಅಹಮದ್‌ ಖಾನ್‌ ಗೆಲುವು ಸಾಧಿಸಿದ್ದರು. ಆದರೆ, 2016ರಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣ ಜೆಡಿಎಸ್‌ನಿಂದ ಜಮೀರ್ ಅವರನ್ನು ಅಮಾನತು ಮಾಡಲಾಗಿತ್ತು.

ಜೆಡಿಎಸ್ ಜತೆ ಮನಸ್ತಾಪ ಹೊಂದಿದ ಬಳಿಕ ಅವರು ಕಾಂಗ್ರೆಸ್‌ ಸೇರಿದರು. 2018ರ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದು ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದ್ದರು. ಇದರ ನಡುವೆಯೇ 2009ರಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಜಮೀರ್ ಸ್ಪರ್ಧಿಸಿದ್ದರು. ಆದರೆ, ಬಿಜೆಪಿಯ ಪಿಸಿ ಮೋಹನ್‌ ಅವರ ಎದುರು ಸೋಲು ಅನುಭವಿಸಿದ್ದರು.

ರಾಜಧಾನಿ ಬೆಂಗಳೂರಿನ ರಾಜಕೀಯದಲ್ಲಿ ಜಮೀರ್ ಅಹ್ಮದ್ ಖಾನ್ ಭಾರೀ ಪ್ರಾಬಲ್ಯ ಹೊಂದಿದ್ದಾರೆ. 2015ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆದಾಗ ಬಿಜೆಪಿ 100 ಸ್ಥಾನಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಿಜೆಪಿಗೆ ಮೇಯರ್ ಪಟ್ಟ ಸಿಕ್ಕಿರಲಿಲ್ಲ. ಇದರ ಹಿಂದೆ ಜಮೀರ್ ಅಹ್ಮದ್ ಅವರ ತಂತ್ರ ಕಾರಣ ಎಂದು ಹೇಳಲಾಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.