ಡ್ರೋನ್ ಪ್ರತಾಪ್ ನನ್ನು ಮದುವೆ ಮಾಡಿಕೊಂದ Zee ಕನ್ನಡದ ಗಗನ, ರವಿಚಂದ್ರನ್ ಹಾಗೂ ರಚಿತಾ ರಾಮ್ ಸಾಕ್ಷಿ

 | 
Njn
ಕನ್ನಡ ಬಿಗ್‌ಬಾಸ್‌ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಅವರು ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಬಿಗ್‌ಬಾಸ್‌ ಬಳಿಕ ಸಖತ್‌ ಫೇಮಸ್‌ ಆಗಿದ್ದ ಪ್ರತಾಪ್‌ ಕೃಷಿ ಹೊಂಡದಲ್ಲಿ ಸ್ಫೋಟದ ಅನ್ವೇಷಣೆ ಮಾಡಿ ಜೈಲು ಸೇರಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿರುವ ಅವರು ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲಿ ಸ್ಪರ್ಧಿಯಾಗಿ ಮತ್ತೆ ಮಿಂಚುತ್ತಿದ್ದಾರೆ. ಈಗ ಹೊಸ ವಿಚಾರ ಏನಂದ್ರೆ ಡ್ರೋನ್‌ ಪ್ರತಾಪ್‌ ಅವರ ಮದುವೆ ನೆರವೇರಿದೆ. 
ಹೌದು, ಸ್ಯಾಂಡಲ್‌ವುಡ್‌ನ ಹಿರಿಯ ನಟ ಹಾಗೂ ನಟಿಯ ಸಮ್ಮುಖದಲ್ಲಿ ಡ್ರೋನ್‌ ಪ್ರತಾಪ್‌ ಮದುವೆ ನಡೆದಿದೆ.ಬಿಗ್‌ಬಾಸ್‌ ಬಳಿಕ ಮದುವೆಯಾಗುವ ಮೂಲಕ ಡ್ರೋನ್‌ ಪ್ರತಾಪ್‌ ಶಾಕ್‌ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಹಾಗೂ ನಟಿ ರಚಿತಾ ರಾಮ್‌ ಅವರ ಸಮ್ಮುಖದಲ್ಲಿ ಡ್ರೋನ್‌ ಪ್ರತಾಪ್‌ ಅವರ ಮದುವೆ ನೆರವೇರಿದೆ. ವೇದಿಕೆ ಮೇಲೆಯೇ ಯುವತಿ ಕೊರಳಿಗೆ ತಾಳಿ ಕಟ್ಟಿ ಎಲ್ಲರಿಗೂ ಶಾಕ್‌ ಕೊಟ್ಟಿದ್ದಾರೆ.
 ಮಧುಮಗನ ಗೆಟಪ್‌ನಲ್ಲೇ ಬಂದು ಮದುವೆ ಮಾಡಿಕೊಂಡಿದ್ದು, ಇದನ್ನು ಕಂಡು ರವಿಚಂದ್ರನ್‌ ಹಾಗೂ ರಚಿತಾ ರಾಮ್‌ ಕೂಡ ಅಚ್ಚರಿಗೆ ಒಳಗಾಗಿದ್ದಾರೆ. ಭರ್ಜರಿ ಬ್ಯಾಚುಲರ್ಸ್‌ ಶೋ ವೇದಿಕೆ ಮೇಲೆ ಈ ಪ್ರಸಂಗ ನಡೆದಿದ್ದು, ಡ್ರೋನ್‌ ಪ್ರತಾಪ್‌ ಅವರು ಸಹಸ್ಪರ್ಧಿಯಾದ ಗಗನಾ ಕೊರಳಿಗೆ ತಾಳಿ ಕಟ್ಟಿದ್ದಾರೆ.ಆದರೆ ಡ್ರೋನ್‌ ಮದುವೆಯಾಗಿರುವುದು ನಿಜವಾಗಿ ಅಲ್ಲ, ಇದು ಭರ್ಜರಿ ಬ್ಯಾಚುಲರ್ಸ್‌ ಶೋನ ಟಾಸ್ಕ್‌ ಎಂದು ತಿಳಿದುಬಂದಿದೆ. ರವಿಚಂದ್ರನ್‌ ಅವರ ರಾಮಾಚಾರಿ ಸಿನಿಮಾದ ಮದುವೆ ಸೀನ್‌ ಅನ್ನು ಈ ವೇದಿಕೆಯಲ್ಲಿ ರೀ ಕ್ರಿಯೇಟ್‌ ಮಾಡಲಾಗಿದೆ.
 ಇದರಲ್ಲಿ ಪ್ರತಾಪ್‌ ಅವರ ರವಿಚಂದ್ರನ್‌ ಅವರ ಗೆಟಪ್‌ನಲ್ಲಿ ಬಂದರೆ, ಮಾಲಾಶ್ರೀ ಅವರ ಗೆಟಪ್‌ನಲ್ಲಿ ಗಗನಾ ವಧುವಿನಂತೆ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಥೇಟ್‌ ರವಿಚಂದ್ರನ್‌ ಅವರು ಪೆದ್ದನಂತೆ ಬಂದು ಮಾಲಾಶ್ರೀ ಕೊರಳಿಗೆ ತಾಳಿ ಕಟ್ಟಿದಂತೆಯೇ, ಪ್ರತಾಪ್‌ ಕೂಡ ಗಗನಾ ಕೊರಳಿಗೆ ತಾಳಿ ಕಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.