ಕಾಟೇರದಲ್ಲಿ ದರ್ಶನ್ ಅವತಾರ ನೋಡಿದ ರಕ್ಷಿತಾ ಪ್ರೇಮ್ ಹೇಳಿದ್ದೇನು ಗೊ.ತ್ತಾ

 | 
ರ

ಕಾಟೇರ ಸಿನಿಮಾ ಜನ ಮೆಚ್ಚುಗೆಯ ಜೊತೆಗೆ ಕೋಟಿ ಕೋಟಿ ಕಲೆಕ್ಷನ್ ಮಾಡುವುದರ ಜೊತೆಗೆ ಶತಕೋಟಿಯ ಸನಿಹಕ್ಕೆ ಬಂದು ನಿಂತಿದೆ. ಈ ಖುಷಿಯನ್ನು ಇಡೀ ಚಿತ್ರ ತಂಡವು ಸಂಭ್ರಮಿಸಿತು. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಸಿನಿಮಾ ಪ್ರದರ್ಶನಕ್ಕೆ ಆಹ್ವಾನಿಸಿತ್ತು. ಅದರಂತೆ ಚಂದನವನದ ಹಿರಿ ಕಿರಿ ಕಲಾವಿದರು ಕಾಟೇರ ಸೆಲೆಬ್ರಿಟಿ ಶೋಗೆ ಆಗಮಿಸಿದ್ದರು. 

ಈ ವೇಳೆ ಮಾತನಾಡಿದ ನಟಿ ರಕ್ಷಿತಾ, ಕಣ್ಣೀರು ಹಾಕುತ್ತಲೇ ದರ್ಶನ್ ಬಗ್ಗೆ ಎಂತಹ ಮಾತು ಹೇಳಿದ್ದಾರೆ ಗೊತ್ತಾ? ನಿಜಕ್ಕೂ ಆಶ್ಚರ್ಯವಾಗುತ್ತದೆ. ಇತ್ತೀಚಿಗಷ್ಟೇ ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋ ನಡೆದಿದೆ. ಸ್ಯಾಂಡಲ್‌ವುಡ್‌ ನಿಂದ ಹಿರಿಯ ನಟಿ ಬಿ. ಸರೋಜ ದೇವಿ, ರಮೇಶ್ ಅರವಿಂದ್, ಯೋಗರಾಜ್ ಭಟ್, ಅಮೂಲ್ಯ ಸೇರಿ ಹಲವು ಕಲಾವಿದರು ಆಗಮಿಸಿ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದರು. 

ಅದ್ಯಾವ ಮಟ್ಟಿಗೆ ಜನ ಸೇರಿದ್ದಾರೆ ಎಂದರೆ ದರ್ಶನ್ ಗೂ ಮತ್ತು ನಿರ್ಮಾಪಕ ರಾಕ್ ಲೈನ್ ಗೂ ಕುಳಿತುಕೊಳ್ಳಲು ಸೀಟ್ ಸಿಕ್ಕಿರಲಿಲ್ಲ. ಮೆಟ್ಟಿಲ ಮೇಲೆ ಕುಳಿತುಕೊಂಡೇ ಸಿನಿಮಾ ನೋಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರಮೇಶ್ ಅರವಿಂದ್, ಬಿ ಸರೋಜ ದೇವಿ ನಟಿ ಶ್ರುತಿ, ಮಾಲಾಶ್ರೀ, ಧನಂಜಯ್, ವಿನೋದ್, ಪ್ರಭಾಕರ್, ಸತೀಶ್ ನೀನಾಸಂ, ಅಮೂಲ್ಯ, ಮೇಘಾ ಶೆಟ್ಟಿ, ಧನ್ವೀರ್ ಗೌಡ, ಅರವಿಂದ್ ಕೆ ಪಿ, ದಿವ್ಯಾ ಉರುಡುಗ, ರಕ್ಷಿತಾ ಪ್ರೇಮ್ ಕುಮಾರ್, ರವಿಚಂದ್ರನ್, ಮನೋರಂಜನ್, ರವಿಚಂದ್ರನ್, ನಿರ್ದೇಶಕರಾದ ಯೋಗರಾಜ್ ಭಟ್, ಚೇತನ್ ಕುಮಾರ್, ಕೃಷ್ಣ, ನಿಶ್ವಿಕ ನಾಯ್ಡು, ಎಸ್. ನಾರಾಯಣ್, ಮೇಘನಾ ಗಾಂವ್ಕರ್, ವಸಿಷ್ಠ ಸಿಂಹ, ಹರಿ ಪ್ರಿಯ, ಪ್ರಿಯಾಂಕ, ಉಪೇಂದ್ರ, ಸುಮಲತಾ, ಅಭಿಷೇಕ್, ಅಂಬರೀಶ್, ಸಾಧು ಕೋಕಿಲ, ದೊಡ್ಡಣ್ಣ ಸೇರಿದಂತೆ ಸಾಕಷ್ಟು ಮಂದಿ ಕಾಟೇರ ಸೆಲೆಬ್ರಿಟಿ ಶೋಗೆ ಆಗಮಿಸಿದ್ದರು.

ಕಾಟೇರ ಸಿನಿಮಾವನ್ನ ವೀಕ್ಷಿಸಿದ ಬಳಿಕ ಮಾತನಾಡಿದ ನಟಿ ರಕ್ಷಿತಾ ಪ್ರೇಮ್ ತುಂಬಾನೇ ಭಾವುಕ. ಹೌದು, ದರ್ಶನ್ ಅವರ ಆಪ್ತ ಸ್ನೇಹಿತೆಯಾಗಿರುವ ರಕ್ಷಿತಾ ಪ್ರೇಮ್, ದರ್ಶನ್ ಅವರ ಕಾಟೇರ ಸಿನಿಮಾವನ್ನ ನೋಡಿ ಜೈ ಡಿಬಾಸ್ ಎನ್ನುತ್ತ ಮಾತು ಆರಂಭಿಸಿದ್ದಾರೆ. ನಾನು ದರ್ಶನ್ ಅವರ ಅಭಿಮಾನಿ ಆಗಿ ಸಿನಿಮಾ ನೋಡಿದೆ. ಕಾಟೇರ ಸಿನಿಮಾ ನೋಡುತ್ತ ಕಣ್ಣಲ್ಲಿ ನೀರು ಬಂತು. ದರ್ಶನ್ ಅವರನ್ನ ತುಂಬಾನೇ ಡಿಫರೆಂಟಾಗಿ ತೋರಿಸಿದ್ದಾರೆ. ಎಲ್ಲರೂ ಬಂದು ಸಿನಿಮಾ ನೋಡಿ. ಕನ್ನಡದ ಕಂದ ದರ್ಶನ್ ಅವರನ್ನು ಹಾರೈಸಿ ಎಂದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.