ಜನುಮದ ಜೋಡಿ ಶಿಲ್ಪಾ ಅವರ ಜೀವನದಲ್ಲಿ ಆಟವಾಡಿದ್ದು ಯಾ ರು ಗೊ ತ್ತಾ
Jul 31, 2024, 13:13 IST
|
ಕೇರಳ ಮೂಲದ ಚೆಲುವೆ ಶಿಲ್ಪಾ ಚಿಪ್ಪಿ ಅವರು ಡಾ.ಶಿವರಾಜ್‌ಕುಮಾರ್ ನಟನೆಯ 'ಜನುಮದ ಜೋಡಿ' ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ 500 ದಿನಗಳು ಓಡಿತ್ತು, ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಇದು ಕನ್ನಡ ಚಿತ್ರರಂಗದಲ್ಲಿ ತುಂಬ ವಿಭಿನ್ನವಾದ ಸಿನಿಮಾ ಎಂದು ಗುರುತಿಸಿಕೊಂಡಿದೆ. ನಟಿ ಶಿಲ್ಪಾ ಈಗ ಏನು ಮಾಡುತ್ತಿದ್ದಾರೆ? ಗೊತ್ತಾದ್ರೆ ಆಶ್ಚರ್ಯ ಪಡ್ತೀರಿ.
ಜನುಮದ ಜೋಡಿ ಸಿನಿಮಾದ ಕನಕಾ ಪಾತ್ರ ಸಿನಿಪ್ರಿಯರ ಮನಸ್ಸಿನಲ್ಲಿ ಹಾಗೇ ಉಳಿದುಕೊಂಡಿದೆ. 1996ರಲ್ಲಿ ತೆರೆಕಂಡ ಹಿಟ್ ಸಿನಿಮಾ ಈ ಜನುಮದ ಜೋಡಿ. ಶಿವಣ್ಣ ಹಾಗೂ ಶಿಲ್ಪಾ ಅವರ ಜೋಡಿ ಅದರ ಜತೆಗೆ ಸಂಗೀತ ಸಿನಿಮಾದ ಪ್ಲಸ್ ಪಾಯಿಂಟ್ ಆಗಿತ್ತು.ಶಿಲ್ಪಾ ಅವರ ನಿಜವಾದ ಹೆಸರು ಚಿಪ್ಪಿ ರೆಂಜಿತ್. ಮಲಯಾಳಂ ಸಿನಿಮಾಗಳಲ್ಲಿ ಶಿಲ್ಪಾ ಚಿಪ್ಪಿ ಎಂದೇ ಖ್ಯಾತರಾಗಿದ್ದಾರೆ.
Also Read - ಅವರಿವರ ಮಾತು ಕೇಳಿ ಎರಡನೇ ಮದುವೆಯಾದ ಶಿಖರ್ ಧವನ್
ಜನುಮದ ಜೋಡಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ನಟಿ ಈಗಲೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದಾರೆ. ಮದುವೆಯಾಗಿ ಸುಂದರವಾದ ಕುಟುಂಬದ ಜೊತೆ ಖುಷಿಯಾಗಿರುವ ಚಿಪ್ಪಿ ನಟಿಯಾಗಿ ಹಾಗೂ ನಿರ್ಮಾಪಕಿಯಾಗಿ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ.ಶಿಲ್ಪಾ ಅವರಿಗೆ ಅವಂತಿಕಾ ಎಂಬ ಮುದ್ದಾದ ಮಗಳು ಸಹ ಇದ್ದಾರೆ. ಶೂಟಿಂಗ್ ಜೊತೆಗೆ ಮಗಳ ಆರೈಕೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಶಿಲ್ಪಾ.
ಅಷ್ಟಕ್ಕೂ ನಿಮಾರ್ಪಕ ರೆಂಜಿತ್ ಅವರನ್ನು ವಿವಾಹವಾಗಿ ಖುಷಿಯಾಗಿರುವ ಶಿಲ್ಪಾ ಧಾರಾವಾಹಿಗಳಲ್ಲೂ ನಟಿಸುತ್ತಿದ್ದಾರೆ. ಮಲಯಾಳಂನಲ್ಲಿ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಶಿಲ್ಪಾ ಸಾಕಷ್ಟು ಸೀರಿಯಲ್ಗಳಲ್ಲಿ ನಟಿಸುತ್ತಿದ್ದಾರೆ. ರೆಜಪುತ್ರ ವಿಶ್ಯುವಲ್ ಮೀಡಿಯಾ ಹಾಗೂ ಮಗಳ ಹೆಸರಿನ ಅವಂತಿಕಾ ಕ್ರಿಯೇಷನ್ಸ್ ಎಂಬ ಹೋಂ ಬ್ಯಾನರ್ ಹೊಂದಿರುವ ಶಿಲ್ಪ, ತಮ್ಮ ಪತಿ ರೆಂಜಿತ್ ಅವರೊಂದಿಗೆ ಸೇರಿ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Also Read - ಅವರಿವರ ಮಾತು ಕೇಳಿ ಎರಡನೇ ಮದುವೆಯಾದ ಶಿಖರ್ ಧವನ್
Mon,6 Jan 2025
ಅವರಿವರ ಮಾತು ಕೇಳಿ ಎರಡನೇ ಮದುವೆಯಾದ ಶಿಖರ್ ಧವನ್
Mon,6 Jan 2025